BIG NEWS | ನದಿಗೆ ಉರುಳಿದ ಭಾರತೀಯ ಸೇನಾ ವಾಹನ: ಏಳು ಯೋಧರು ಬಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತೀಯ ಯೋಧರು ಪ್ರಯಾಣಿಸುತ್ತಿದ್ದ ಸೇನಾ ವಾಹನ ನಿಯಂತ್ರಣ ಕಳೆದುಕೊಂಡು ನದಿಗೆ ಉರುಳಿ ಬಿದ್ದಿರುವ ಘಟನೆ ಜಮ್ಮು-ಕಾಶ್ಮೀರದ ಲಡಾಖ್​ನಲ್ಲಿ ನಡೆದಿದೆ. ಪರಿಣಾಮ ಏಳು ಯೋಧರು ಬಲಿಯಾಗಿದ್ದಾರೆ.
ಉಳಿದಂತೆ ಅನೇಕರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗ್ತಿದೆ.
ಗಂಭೀರವಾಗಿ ಗಾಯಗೊಂಡವರನ್ನ ವಿಮಾನದ ಮೂಲಕ ಬೇರೆ ಆಸ್ಪತ್ರೆಗೆ ಸ್ಥಳಾಂತರ ಮಾಡುವ ಕೆಲಸ ಮಾಡಲಾಗ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
26 ಸೈನಿಕರ ತಂಡ ಪಾರ್ತಾಪುರದ ಟ್ರಾನ್ಸಿಟ್​​ ಕ್ಯಾಂಪ್​​ನಿಂದ ಮುಂದಿನ ಸ್ಥಳಕ್ಕೆ ಪ್ರಯಾಣಿಸುತ್ತಿತ್ತು. ಬೆಳಗ್ಗೆ 9 ಗಂಟೆಗೆ ಥೋಯಿಸ್​ನಿಂದ 25 ಕಿಲೋ ಮೀಟರ್ ದೂರ ಚಲಿಸಿದ ಬಳಿಕ ಸೇನಾ ವಾಹನ ಸ್ಕಿಡ್​​ ಆಗಿ ಲಡಾಖ್​ನ ತುರ್ತುಕ್​ ಸೆಕ್ಟರ್​ನ ಶ್ಯೋಕ್ ನದಿಯಲ್ಲಿ ಉರುಳಿ ಬಿದ್ದಿದೆ. ಪರಿಣಾಮ ಏಳು ಯೋಧರು ಹುತಾತ್ಮರಾಗಿದ್ದಾರೆ.
ವಾಹನ ಸುಮಾರು 50-60 ಅಡಿ ಆಳಕ್ಕೆ ಬಿದ್ದಿದೆ ಎಂದು ತಿಳಿದು ಬಂದಿದೆ. ಇಲ್ಲಿಯವರೆಗೆ ಏಳು ಯೋಧರು ಹುತಾತ್ಮರಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಇತರ ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!