ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಬೆಳಗ್ಗೆ ತಿರುಪತಿಗೆ ಭೇಟಿ ನೀಡಿದ ಭಾರತೀಯ ಕ್ರಿಕೆಟ್ ಆಟಗಾರರಾದ ರಿಷಬ್ ಪಂತ್ ಹಾಗೂ ಅಕ್ಷರ್ ಪಟೇಲ್ ತಿರುಮಲ ಶ್ರೀವಾರಿ ದರುಶನ ಪಡೆದರು. ವಿಐಪಿ ಬ್ರೇಕ್ ದರ್ಶನದಲ್ಲಿ ಸ್ವಾಮಿಯ ದರ್ಶನ ಪಡೆದ ಆಟಗಾರರು, ಶ್ರದ್ಧಾ ಭಕ್ತಿಯಿಂದ ಶ್ರೀವಾರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಇನ್ನು ನಿನ್ನೆ ಒಂದೇ ದಿನ (ಗುರುವಾರ) 59,335 ಭಕ್ತರು ದೇವರ ದರುಶನ ಪಡೆದಿದ್ದಾರೆ. ಶ್ರೀವಾರಿ ಹುಂಡಿಗೆ 3.29 ಕೋಟಿ ರೂ. ಸಂಗ್ರಹವಾಗಿದ್ದು, ತಿರುಮಲದಲ್ಲಿ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. 23 ಕಂಪಾರ್ಟ್‌ಮೆಂಟ್‌ಗಳಲ್ಲಿ ಭಕ್ತರು ಶ್ರೀಗಳ ದರ್ಶನಕ್ಕೆ ಕಾಯುತ್ತಿದ್ದಾರೆ. ಟೋಕನ್ ಇಲ್ಲದೆ ಶ್ರೀವಾರಿ ಸರ್ವದರ್ಶನ ತಲುಪಲು 12 ಗಂಟೆ ಸಮಯ ಬೇಕಿದೆ.
#WATCH | Tirupati, Andhra Pradesh: Cricketers Rishabh Pant and Axar Patel visit Lord Balaji Temple. pic.twitter.com/aZVv8SX9gL
— ANI (@ANI) November 3, 2023