April 12, 2026
Sunday, April 12, 2026
spot_img

ಫುಲ್ ಪ್ರೊಟೆಕ್ಷನ್ ನಲ್ಲಿ ಹಾರ್ಮುಜ್ ದಾಟಿದ ಶಿವಾಲಿಕ್, ನಂದಾದೇವಿ: ಇನ್ನೆರಡು ದಿನದಲ್ಲಿ ಮುಂಬೈ ಸೇರಲಿದೆ ಹಡಗು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭದ್ರತಾ ಆತಂಕಗಳ ನಡುವೆಯೂ ಭಾರತದ ಎಲ್‌ಪಿಜಿ ಸಾಗಣೆ ಹಡಗು ಒಂದು ಯಶಸ್ವಿಯಾಗಿ ಹಾರ್ಮುಜ್ ಜಲಸಂಧಿಯನ್ನು ದಾಟಿದೆ. ಭಾರತೀಯ ನೌಕಾಪಡೆಯ ಬೆಂಗಾವಲಿನಲ್ಲಿ ಸಂಚರಿಸಿದ ಈ ಹಡಗು 40,000 ಮೆಟ್ರಿಕ್ ಟನ್‌ಗಳಿಗಿಂತ ಹೆಚ್ಚು ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು ಹೊತ್ತಿದ್ದುದಾಗಿ ಮೂಲಗಳು ತಿಳಿಸಿವೆ.

ಭಾರತೀಯ ಧ್ವಜ ಹೊಂದಿರುವ ಶಿವಾಲಿಕ್ ಹಡಗು ಜಲಸಂಧಿಯನ್ನು ದಾಟಿದ ಬಳಿಕ ಸುರಕ್ಷಿತವಾಗಿ ಮುಕ್ತ ಸಮುದ್ರಕ್ಕೆ ತಲುಪಿದೆ. ಈ ಹಡಗು ಇನ್ನೆರಡು ದಿನಗಳ ಒಳಗೆ ಮುಂಬೈ ಅಥವಾ ಕಾಂಡ್ಲಾ ಬಂದರು ತಲುಪುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಇದೇ ವೇಳೆ ಎಲ್‌ಪಿಜಿ ಸಾಗಣೆ ಮಾಡುತ್ತಿರುವ ಮತ್ತೊಂದು ಹಡಗು ನಂದಾದೇವಿ ಕೂಡ ನೌಕಾಪಡೆಯ ರಕ್ಷಣೆಯಲ್ಲಿ ಜಲಸಂಧಿಯನ್ನು ದಾಟಿದೆ. ಅದು ಕೂಡ ಶೀಘ್ರದಲ್ಲೇ ಭಾರತದ ಬಂದರು ತಲುಪುವ ನಿರೀಕ್ಷೆಯಿದೆ.

ಇದನ್ನೂ ಓದಿ:

ಭಾರತೀಯ ಹಡಗುಗಳಿಗೆ ಸಂಚಾರಕ್ಕೆ ಅವಕಾಶ ನೀಡುವಂತೆ ಭಾರತ ಇರಾನ್ ಸರ್ಕಾರಕ್ಕೆ ಮನವಿ ಮಾಡಿತ್ತು. ಈ ಮನವಿಗೆ ಸ್ಪಂದಿಸಿದ ಇರಾನ್, ಭಾರತೀಯ ಹಡಗುಗಳಿಗೆ ನಿರ್ದಿಷ್ಟ ಮಾರ್ಗದಲ್ಲಿ ಸಂಚಾರಕ್ಕೆ ಅನುಮತಿ ನೀಡಿದೆ. ಮುಂದಿನ ದಿನಗಳಲ್ಲಿ ಇನ್ನೂ ಹಲವು ಹಡಗುಗಳು ಇದೇ ಮಾರ್ಗದ ಮೂಲಕ ಭಾರತಕ್ಕೆ ಬರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಾಗತಿಕ ತೈಲ ಸಾಗಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಹಾರ್ಮುಜ್ ಜಲಸಂಧಿಯಲ್ಲಿ ಭದ್ರತೆ ಕಾಪಾಡಲು ಭಾರತೀಯ ನೌಕಾಪಡೆಯ ಬೆಂಗಾವಲು ಮುಂದುವರಿಯಲಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !