ಹಿಂದೂ ಮಹಾಸಾಗರ ಪ್ರವೇಶಿಸಿದ ಚೀನಾದ ಮತ್ತೊಂದು ಹಡಗು, ʼಸೂಕ್ಷ್ಮವಾಗಿʼ ಗಮನಿಸುತ್ತಿದೆ ಭಾರತ: ವರದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಸಂಶೋಧನೆಯ ಹೆಸರಿನಲ್ಲಿ ಚೀನಾದ ಮತ್ತೊಂದು ನೌಕೆಯು ಹಿಂದೂ  ಮಹಾಸಾಗರ ಪ್ರದೇಶವನ್ನು ಪ್ರವೇಶಿಸಿದ್ದು ಅದರ ಚಲನವಲನಗಳನ್ನು ಭಾರತ ʼಸೂಕ್ಷ್ಮವಾಗಿʼ ಗಮನಿಸುತ್ತಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಶ್ರೀಲಂಕಾದ ಹಂಬನ್ ತೋಟ ಬಂದರಿಗೆ ಚೀನಾ ಸಂಶೋಧನೆಯ ನೆಪದಲ್ಲಿ ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆ ಹಾಗೂ ಉಪಗ್ರಹ ಟ್ರ್ಯಾಕಿಂಗ್  ಸಾಮರ್ಥ್ಯದ ಹಡಗು ʼಯುವಾನ್ ವಾಂಗ್ 5ʼ ಅನ್ನು ಕಳುಹಿಸಿದ್ದು ಭಾರತದ ಕೆಂಗಣ್ಣಿಗೆ ಗುರಿಯಾಗಿತ್ತು. ಮೂರು ತಿಂಗಳೊಳಗೆ ಚೀನಾ ಮತ್ತೊಂದು ನೌಕೆಯನ್ನು ಹಿಂದೂ ಮಹಾಸಾಗರಕ್ಕೆ ಕಳುಹಿಸಿದೆ, ಚೀನಾ ಆಭರತದ ಮೇಲೆ ಕಣ್ಣಿಡಲು ಕಳುಹಿಸಿರುವ ʼಗೂಢಚಾರ ಹಡಗುʼ ಇದು ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಭಾರತವು ಯೋಜಿಸಿರುವ ಕ್ಷಿಪಣಿ ಪರೀಕ್ಷೆಗೆ ಮುಂಚಿತವಾಗಿ ಚೀನಾ ಬೇಹುಗಾರಿಕಾ ಹಡಗನ್ನು ಕಳುಹಿಸಿದೆ ಎಂದು ವರದ ತಿಳಿಸಿದೆ.
ಭಾರತದ ಗಡಿಯ ಬಳಿ ನಿಯೋಜಿಸಲಾಗುತ್ತಿರುವ ಇತ್ತೀಚಿನ ಚೀನಾದ ಬೇಹುಗಾರಿಕಾ ಹಡಗು ಹಿಂದಿನ ದರ್ಜೆಯಂತೆಯೇ ಇದೆ ಮತ್ತು ಕ್ಷಿಪಣಿ ಪರೀಕ್ಷೆಗಳು ಮತ್ತು ಉಪಗ್ರಹಗಳ ಚಲನೆಯನ್ನು ಮೇಲ್ವಿಚಾರಣೆ ಮಾಡಲು ವಿನ್ಯಾಸಗೊಳಿಸಲಾಗಿದೆ.
ಮೆರೈನ್ ಟ್ರಾಫಿಕ್ ಸೂಚಿಸಿದಂತೆ ಹೈಟೆಕ್ ಸಂಶೋಧನಾ ನೌಕೆಯು ಹಿಂದೂ ಮಹಾಸಾಗರವನ್ನು ದಾಟಿದೆ ಮತ್ತು ಬಾಲಿ ಕರಾವಳಿಯಿಂದ ನೌಕಾಯಾನ ಮಾಡುತ್ತಿದೆ ಎಂದು ವರದಿ ಸೇರಿಸಲಾಗಿದೆ.
ಚೀನಾದ ನೌಕೆ ಹಿಂದೂ ಮಹಾಸಾಗರದ ಪ್ರದೇಶವನ್ನು ಪ್ರವೇಶಿಸಿದಾಗಿನಿಂದ ಭಾರತೀಯ ನೌಕಾಪಡೆಯು ಅದರ ಚಲನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಲಾಗಿದೆ.
ಭಾರತವು ಮುಂಬರುವ ತನ್ನ ಕ್ಷಿಪಣಿ ಪರೀಕ್ಷೆ ವೇಳೆ ಬಂಗಾಳಕೊಲ್ಲಿ ಪ್ರದೇಶದ ಮೇಲೆ ಹಾರಾಟ ನಿಷೇಧ ವಲಯಕ್ಕೆ ಅಧಿಸೂಚನೆಯನ್ನು ಹೊರಡಿಸಿದೆ. ವರದಿಯ ಪ್ರಕಾರ, 2,200 ಕಿಮೀ ವ್ಯಾಪ್ತಿಯನ್ನು ಹೊಂದಿರುವ ಈ ಕ್ಷಿಪಣಿಯು ಒಡಿಶಾದ ಕರಾವಳಿಯ ಅಬ್ದುಲ್ ಕಲಾಂ ದ್ವೀಪದಿಂದ ನವೆಂಬರ್ 10-11 ರ ದಿನಾಂಕದ ನಡುವೆ ಉಡಾವಣೆಯಾಗುವ ಸಾಧ್ಯತೆಯಿದೆ.
ಶ್ರೀಲಂಕಾವು ಕೊಲಂಬೊ ಹಂಬಂಟೋಟಾ ಬಂದರನ್ನು 99 ವರ್ಷಗಳ ಕಾಲ  1.12 ಶತಕೋಟಿ ಅಮೆರಿಕನ್‌ ಡಾಲರ್‌ ಗೆ ಚೀನಾಕ್ಕೆ ಗುತ್ತಿಗೆ ನೀಡಿರುವುದರಿಂದ ಶ್ರೀಲಂಕಾವು ಚೀನಾದ ಮೇಲೆ ಅವಲಂಬಿತವಾಗಿರುವ ಬಗ್ಗೆ ಭಾರತವೂ ಚಿಂತಿಸುತ್ತಿದೆ.
ಹಂಬಂಟೋಟದ ದಕ್ಷಿಣದ ಆಳ ಸಮುದ್ರ ಬಂದರನ್ನು ಅದರ ಸ್ಥಳಕ್ಕಾಗಿ ಆಯಕಟ್ಟಿನ ಪ್ರಮುಖವೆಂದು ಪರಿಗಣಿಸಲಾಗಿದೆ. ಆದಾಗ್ಯೂ, ಆರ್ಥಿಕ ಬಿಕ್ಕಟ್ಟು ಶ್ರೀಲಂಕಾವನ್ನು ಬಾಧಿಸಿದ ಬಳಿಕ ಭಾರತವು 3.8 ಶತಕೋಟಿ ಅಮೆರಿಕನ್‌ ಡಾಲರ್ ಮೌಲ್ಯದ ಬೆಂಬಲವನ್ನು ನೀಡಲು ಮುಂದಾಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಹಾಲಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಸೇರಿದಂತೆ ಲಂಕಾದ ಉನ್ನತ ನಾಯಕರು ಭಾರತದ ನೆರವಿಗಾಗಿ ಸಾರ್ವಜನಿಕವಾಗಿ ಧನ್ಯವಾದ ಸಲ್ಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!