ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಮೂಲದ ಅಜಯ್ ಬಂಗಾ ತನ್ನ ಮುಂದಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ವಿಶ್ವಬ್ಯಾಂಕ್ ಹೇಳಿದೆ. ವಿಶ್ವಬ್ಯಾಂಕ್‌ನ 25 ಸದಸ್ಯರ ಕಾರ್ಯನಿರ್ವಾಹಕ ಮಂಡಳಿಯು ಬುಧವಾರ ಮಾಸ್ಟರ್‌ಕಾರ್ಡ್ ಮಾಜಿ ಸಿಇಒ ಅಜಯ್ ಬಂಗಾ ಅವರನ್ನು ಐದು ವರ್ಷಗಳ ಅವಧಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ.
ಮಾಸ್ಟರ್‌ಕಾರ್ಡ್‌ನ ಮಾಜಿ ಸಿಇಒ ಮತ್ತು ಭಾರತ ಮೂಲದ ಅಜಯ್ ಬಂಗಾರ ಹೆಸರನ್ನು ವಿಶ್ವಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ ಮಾಡುವುದಾಗಿ ಯುಎಸ್ ಅಧ್ಯಕ್ಷ ಜೋ ಬೈಡೆನ್ ಈ ಹಿಂದೆ ಹೇಳಿದ್ದರು. ವಿಶ್ವಬ್ಯಾಂಕ್‌ನ ಮುಖ್ಯಸ್ಥರಾಗಿದ್ದ ಡೇವಿಡ್ ಮಾಲ್ಪಾಸ್ ಶೀಘ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ ಬಳಿಕ ಯುಎಸ್ ಅಧ್ಯಕ್ಷ ಫೆಬ್ರವರಿ ಅಂತ್ಯದಲ್ಲಿ ವಿಶ್ವ ಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ಅಜಯ್ ಬಂಗಾರನ್ನು ಶಿಫಾರಸು ಮಾಡಿತ್ತು.
63 ವರ್ಷದ ಅಜಯ್ ಬಂಗಾ ಜೂನ್ 2 ರಿಂದ ವಿಶ್ವಬ್ಯಾಂಕ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಬಂಗಾ ಅವರು ಜೂನ್ 2 ರಂದು ಡೇವಿಡ್ ಮಾಲ್ಪಾಸ್ ಅವರಿಂದ ಅಧಿಕಾರ ವರ್ಗಾವಣೆ ಮಾಡಿಕೊಳ್ಳಲಿದ್ದಾರೆ.
ಅಜಯ್ ಬಂಗಾ 2021ರಲ್ಲಿ ಆರಂಭವಾದ ಜನರಲ್ ಅಟ್ಲಾಂಟಿಕ್‌ನ ಬಿಯಾಂಡ್‌ನೆಟ್‌ಜಿರೋ ಸಾಹಸೋದ್ಯಮಕ್ಕೆ ಸಲಹೆಗಾರರಾಗಿದ್ದವರು. ಮಾಸ್ಟರ್‌ಕಾರ್ಡ್ ಮುಖ್ಯಸ್ಥರಾಗಿ ಮತ್ತು ಅಮೇರಿಕನ್ ರೆಡ್ ಕ್ರಾಸ್, ಕ್ರಾಫ್ಟ್ ಫುಡ್ಸ್ ಮತ್ತು ಡೌ ಇಂಕ್‌ನ ಮಂಡಳಿಗಳಲ್ಲಿಯೂ ಸೇವೆ ನೀಡಿ ಸುಮಾರು 30 ವರ್ಷಗಳ ಅನುಭವವನ್ನು ಹೊಂದಿರುತ್ತಾರೆ.