ಅಮೆರಿಕಾದಲ್ಲಿ ಭಾರತೀಯ ಮೂಲದ ಉದ್ಯಮಿ ಸುಖಿ ಚಾಹಲ್ ನಿಗೂಢ ಸಾವು: ಸಾವಿನ ಸುತ್ತ ಅನುಮಾನದ ಹುತ್ತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಮೂಲದ ಉದ್ಯಮಿ ಮತ್ತು ಖ್ಯಾತ ಸಾಮಾಜಿಕ ಕಾರ್ಯಕರ್ತ ಸುಖಿ ಚಾಹಲ್ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಖಲಿಸ್ತಾನ್ ಪ್ರತ್ಯೇಕತಾವಾದದ ತೀವ್ರ ವಿರೋಧಿಯಾಗಿದ್ದ ಚಾಹಲ್ ಅವರು ತಮ್ಮ ನಿಷ್ಕಳಂಕ ಚಟುವಟಿಕೆಗಳಿಂದ ಭಾರತೀಯ ವಲಸಿಗರಲ್ಲಿ ಜನಪ್ರಿಯರಾಗಿದ್ದವರು. ಅವರ ಆಕಸ್ಮಿಕ ಮತ್ತು ಅನುಮಾನಾಸ್ಪದ ಸಾವು ಭಾರತೀಯರಲ್ಲಿ ಆತಂಕದ ವಾತಾವರಣ ಮೂಡಿಸಿದೆ.

ಚಾಹಲ್ ಅವರ ಆಪ್ತ ಸ್ನೇಹಿತ ಜಸ್ಪಾಲ್ ಸಿಂಗ್ ಪ್ರಕಾರ, ಅವರು ಸ್ನೇಹಿತರ ಮನೆಯೊಂದಕ್ಕೆ ಊಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. “ಅವರು ಊಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ತೀವ್ರ ಅಸ್ವಸ್ಥರಾದರು. ತಕ್ಷಣವೇ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟರು” ಎಂದು ಸಿಂಗ್ ವಿವರಿಸಿದ್ದಾರೆ. ಚಾಹಲ್ ಅವರು ಆರೋಗ್ಯವಂತರಾಗಿದ್ದರು ಅವರ ಈ ಸಾವು ಹಲವು ಅನುಮಾನಗಳಿಗೆ ಕಾರಣವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಚಾಹಲ್ ಅವರು ಖಲಿಸ್ತಾನ್ ಪ್ರತ್ಯೇಕತಾವಾದದ ವಿರುದ್ಧ ಸದಾ ಧ್ವನಿ ಎತ್ತುತ್ತಿದ್ದವರು. ಅವರು ಸ್ಥಾಪಿಸಿರುವ ‘ದಿ ಖಾಲ್ಸಾ ಟುಡೇ’ ಮಾಧ್ಯಮದ ಮೂಲಕ ತಮ್ಮ ಅಭಿಪ್ರಾಯಗಳನ್ನು ನಿರ್ಭಯವಾಗಿ ಹಂಚಿಕೊಳ್ಳುತ್ತಿದ್ದರು. ಇತ್ತೀಚೆಗಷ್ಟೇ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಅಮೆರಿಕದ ಕಾನೂನನ್ನು ಗೌರವಿಸುವ ಮಹತ್ವದ ಕುರಿತು ಪೋಸ್ಟ್ ಮಾಡಿದ್ದರು. ಅಲ್ಲಿ ಅವರು, “ಅಮೆರಿಕವು ಕಾನೂನು ಮತ್ತು ಸುವ್ಯವಸ್ಥೆಯ ನಾಡು. ಇಲ್ಲಿ ಕಾನೂನು ಉಲ್ಲಂಘನೆಯು ಗಂಭೀರ ಪರಿಣಾಮಗಳಿಗೂ ಕಾರಣವಾಗಬಹುದು,” ಎಂಬ ಸಂದೇಶವನ್ನು ನೀಡಿದ್ದರು.

ಅವರ ತೀವ್ರ ದೇಶಭಕ್ತ ಮನೋಭಾವನೆ, ಸಮಾಜಮುಖಿ ಚಟುವಟಿಕೆಗಳು, ಮತ್ತು ಖಲಿಸ್ತಾನ ವಿರುದ್ಧದ ಕಠಿಣ ನಿಲುವುಗಳು ಹಲವು ವೈರಿಗಳನ್ನು ಸೆಳೆದಿರಬಹುದೆಂಬ ಶಂಕೆ ಉಂಟುಮಾಡುತ್ತಿದೆ. ಅಮೆರಿಕದ ತನಿಖಾ ಸಂಸ್ಥೆಗಳು ಈ ಬಗ್ಗೆ ಸಂಪೂರ್ಣ ತನಿಖೆ ನಡೆಸುತ್ತಿರುವುದು ಮತ್ತು ಮುಂದಿನ ದಿನಗಳಲ್ಲಿ ಶವಪರೀಕ್ಷೆ ವರದಿ ಹೊರಬರಲಿದ್ದು, ಇದರಿಂದ ಸತ್ಯ ಹೊರಬರಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!