ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಮೂಲದ ಕಾಶ್ ಪಟೇಲ್ ಅವರು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ನ ಒಂಬತ್ತನೇ ನಿರ್ದೇಶಕರಾಗಿ ಪ್ರಮಾಣ ವಚನ ಸ್ವೀಕರಿಸಿದರು, ಭಗವದ್ಗೀತೆಯ ಮೇಲೆ ಕೈ ಇಟ್ಟು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಕಾಶ್ ಪಟೇಲ್ ಅವರ ಕುಟುಂಬ ಸದಸ್ಯರು ಐಸೆನ್‌ಹೋವರ್ ಕಾರ್ಯನಿರ್ವಾಹಕ ಕಚೇರಿ ಕಟ್ಟಡದಲ್ಲಿ ಉಪಸ್ಥಿತರಿದ್ದರು.
ಕಾಶ್ ಪಟೇಲ್ ಅವರು ರಾಷ್ಟ್ರದ ಪ್ರಧಾನ ಫೆಡರಲ್ ಕಾನೂನು ಜಾರಿ ಸಂಸ್ಥೆಯನ್ನು ಮುನ್ನಡೆಸಲು ಈ ಅವಕಾಶವನ್ನು ತಮ್ಮ ಜೀವನದ “ಮಹಾನ್ ಗೌರವ” ಎಂದು ಬಣ್ಣಿಸಿದ್ದಾರೆ.