ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮೂಲದ ಕಾಶ್ ಪಟೇಲ್(ಕಶ್ಯಪ್ ಪಟೇಲ್) ಅವರನ್ನು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್(ಎಫ್‌ಬಿಐ) ನಿರ್ದೇಶಕರನ್ನಾಗಿ ನೇಮಿಸಲಾಗಿದ್ದು, ಶ್ವೇತಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದ ದಿನದಂದು ಹಲವಾರು ಯೋಜನೆಗಳನ್ನು ಜಾರಿಮಾಡಿದ್ದಾರೆ.
ಎಫ್‌ಬಿಐ ಪ್ರಧಾನ ಕಚೇರಿಯಲ್ಲಿರುವ 1,000 ಉದ್ಯೋಗಿಗಳನ್ನು ದೇಶಾದ್ಯಂತದ ಕ್ಷೇತ್ರ ಕಚೇರಿಗಳಿಗೆ ಸ್ಥಳಾಂತರಿಸಲು ಯೋಚಿಸಲಾಗಿದ್ದು, ಹೆಚ್ಚುವರಿ 500 ಜನರನ್ನು ಅಲಬಾಮಾದ ಹಂಟ್ಸ್‌ವಿಲ್ಲೆಯಲ್ಲಿರುವ ಬ್ಯೂರೋಗೆ ಸ್ಥಳಾಂತರಿಸಲು ಯೋಜಿಸುತ್ತಿರುವುದಾಗಿ ಹೊಸ ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ತಮ್ಮ ಪ್ರಮಾಣವಚನ ಸಮಾರಂಭದಲ್ಲಿ, ದೇಶದ ಪ್ರಮುಖ ಫೆಡರಲ್ ಕಾನೂನು ಜಾರಿ ಸಂಸ್ಥೆಯನ್ನು ಮುನ್ನಡೆಸುವ ಅವಕಾಶವನ್ನು ಪಟೇಲ್ ತಮ್ಮ ಜೀವನದ ಶ್ರೇಷ್ಠ ಗೌರವ ಎಂದು ಕರೆದಿದ್ದಾರೆ.
ವಾಷಿಂಗ್ಟನ್‌ನಲ್ಲಿ ಎಫ್‌ಬಿಐನ ಹೆಜ್ಜೆಗುರುತನ್ನು ಗಟ್ಟಿಗೊಳಿಸಲು ಮತ್ತು ಇತರ ನಗರಗಳಲ್ಲಿನ ಕಚೇರಿಗಳಲ್ಲಿ ಹೆಚ್ಚಿನ ಉಪಸ್ಥಿತಿಯನ್ನು ಹೊಂದಲು ಕಾಶ್ ಪಟೇಲ್ ಅವರು ದೀರ್ಘಕಾಲದಿಂದ ಹೇಳಿಕೊಂಡಿದ್ದ ನಿರ್ಣಯವನ್ನು ಈ ಯೋಜನೆಗಳು ಪ್ರತಿಬಿಂಬಿಸುತ್ತವೆ.