ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಬುದ್ಧಿವಂತ ವ್ಯಕ್ತಿ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.
ಎರಡೂ ದೇಶಗಳ ನಡುವೆ ಐತಿಹಾಸಿಕ ಸೌಹಾರ್ದವಿದೆ. ಭಾರತದ ಕಡೆ ಇಡೀ ವಿಶ್ವವೇ ತಿರುಗಿ ನೋಡುವಂಥ ಸಾಧನೆಯನ್ನು ಭಾರತ ಮಾಡಿದೆ. ಪ್ರಧಾನಿ ಮೋದಿ ನಾಯಕತ್ವದಲ್ಲಿ ಭಾರತ ಅಭಿವೃದ್ಧಿಯ ದಾರಿ ಹಿಡಿದಿದೆ ಎಂದಿದ್ದಾರೆ.
ಅವರ ಜಾಣ್ಮೆಯಿಂದಲೇ ದೇಶ ಇನ್ನಷ್ಟು ಪ್ರಗತಿ ಹೊಂದುತ್ತಿದೆ. ನಾವು ಕೂಡ ಉತ್ತಮ ರಾಜಕೀಯ ಸಂಬಂಧವನ್ನು ಹೊಂದಿದ್ದೇವೆ. ಆರ್ಥಿಕ ಭದ್ರತೆ ಮತ್ತು ಸೈಬರ್ ಅಪರಾಧದ ವಿರುದ್ಧದ ಹೋರಾಟದಲ್ಲಿ ರಷ್ಯಾ ಮತ್ತು ಭಾರತದ ನಡುವೆ ಸಹಕಾರವಿದೆ ಎಂದಿದ್ದಾರೆ