ಅಧಿಕಾರಿಗಳ ಅಮಾನತು ಆದೇಶ ವಾಪಸ್ ಪಡೆಯಿರಿ: ಸರ್ಕಾರಕ್ಕೆ ಭಾರತೀಯ ಪೊಲೀಸ್​ ಒಕ್ಕೂಟ ಆಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬೆಂಗಳೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಕಾರಣ ನೀಡಿ ಬೆಂಗಳೂರು ನಗರ ಪೊಲೀಸ್​ ಆಯುಕ್ತರಾಗಿದ್ದ ಬಿ. ದಯಾನಂದ್ ಸೇರಿಂದಂತೆ ಐವರು ಅಧಿಕಾರಿಗಳನ್ನು ಅಮಾನತು ಮಾಡಿರುವ ಆದೇಶ ವಾಪಸ್ ಪಡೆಯುವಂತೆ ರಾಜ್ಯ ಸರ್ಕಾರಕ್ಕೆ ಭಾರತೀಯ ಪೊಲೀಸ್​ ಒಕ್ಕೂಟ ಆಗ್ರಹಿಸಿದೆ.

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಒಕ್ಕೂಟವು, ವೈಯಕ್ತಿಕ ಜವಾಬ್ದಾರಿಯನ್ನು ಸ್ಥಾಪಿಸದೆ ಕ್ರಮ ಕೈಗೊಳ್ಳುವುದು, ಪೊಲೀಸ್ ಪಡೆಯನ್ನು ಬಲಿಪಶುವನ್ನಾಗಿ ಮಾಡುವುದು ಮತ್ತು ನೈತಿಕತೆಯನ್ನು ಕುಗ್ಗಿಸುವುದಕ್ಕೆ ಸಮಾನವಾಗಿದೆ ಎಂದು ಹೇಳಿದೆ.

ವಿವರವಾದ ತನಿಖೆ ಪೂರ್ಣಗೊಳ್ಳುವ ಮೊದಲು ಹೊರಡಿಸಲಾದ ಅಮಾನತು ಆದೇಶಗಳು ದೇಶಾದ್ಯಂತ ವೃತ್ತಿಪರ ಪೊಲೀಸ್ ಸಮುದಾಯದಲ್ಲಿ ಗಂಭೀರ ಕಳವಳಗಳನ್ನು ಹುಟ್ಟುಹಾಕಿವೆ. ಶಿಸ್ತು ಕ್ರಮ ಅಗತ್ಯವಿದ್ದರೆ, ವಿಚಾರಣೆಗಳ ಆಧಾರದ ಮೇಲೆ ಕೈಗೊಳ್ಳಬೇಕೆ ಹೊರತು, ವಿಚಾರಣೆಗೂ ಮುಂಚಿತವಾಗಿರಬಾರದು.

ದೊಡ್ಡ ಸಾರ್ವಜನಿಕ ಕಾರ್ಯಕ್ರಮಗಳು, ವಿಶೇಷವಾಗಿ ಕಡಿಮೆ ಸಮಯದಲ್ಲಿ ಆಯೋಜಿಸಲಾದ ಕಾರ್ಯಕ್ರಮಗಳಿಗೆ, ಬಹು ನಾಗರಿಕ, ಆಡಳಿತ ಮತ್ತು ರಾಜಕೀಯ ಸಂಸ್ಥೆಗಳ ನಡುವೆ ಸಂಘಟಿತ ಯೋಜನೆಯ ಅಗತ್ಯವಿರುತ್ತದೆ. ಕಾಲ್ತುಳಿತ ಪ್ರಕರಣದಲ್ಲಿ ಪೊಲೀಸರನ್ನು ಮಾತ್ರ ಹರಕೆಯ ಕುರಿಗಳನ್ನಾಗಿ ಮಾಡಿದ್ದೀರಿ. ಕಾಲ್ತುಳಿತ ದುರಂತದ ಕುರಿತು ನಿಷ್ಪಕ್ಷಪಾತವಾಗಿ ತನಿಖೆಯಾಗಲಿ. ವಿಚಾರಣೆ ಮುಗಿಯುವವರೆಗೆ ಅಮಾನತು ಪೊಲೀಸರನ್ನು ಮರು ನೇಮಿಸಿ. ತನಿಖೆ ನಂತರ ಶಿಸ್ತು ಕ್ರಮ ಅಗತ್ಯವಿದ್ದರೆ, ಕೈಗೊಳ್ಳಿ. ಕಾಲ್ತುಳಿತ ದುರಂತ ಪ್ರಕರಣಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ ಮೃತರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!