Friday, December 8, 2023

Latest Posts

ಕತೆ ಹೇಳುವ ಫೋಟೊ: ಅಲುಮಿನಿಯಂ ಬೋಗಿ

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಇದು ಭಾರತೀಯ ರೈಲ್ವೆಯ ಸರಕು ಸಾಗಣೆ ರೈಲಿಗೆ ಉಪಯೋಗಿಸುವ ಬೋಗಿ ಅಥವಾ ರೇಕ್ ಚಿತ್ರ. ಈ ಸಾಧಾರಣ ಚಿತ್ರ ಹಲವು ವಿಶೇಷಗಳನ್ನು ಸಾರುತ್ತಿದೆ. ಇದು ಭಾರತದ ಮೊದಲ ಅಲುಮಿನಿಯಂ ರೈಲು ಸಾಗಣೆ ಡಬ್ಬಿ. ಕಬ್ಬಿಣದ ಜಾಗದಲ್ಲಿ ಅಲುಮಿನಿಯಂ ಬಂದುಬಿಟ್ಟ ಮಾತ್ರಕ್ಕೆ ಅದರಲ್ಲಿ ಬರೆಯಲಿಕ್ಕೇನಿದೆ ಅಂದಿರಾ? ವಿಶೇಷಗಳು ಹೀಗಿವೆ ನೋಡಿ.

  • ಇದು ಉಕ್ಕಿನ ಸಾಗಣೆ ಡಬ್ಬಿಗಿಂತ 180 ಟನ್ ಕಡಿಮೆ ತೂಕವಿರುತ್ತದೆ. ತೂಕ ಕಡಿಮೆಯಾದಷ್ಟೂ ರೈಲನ್ನು ಎಳೆಯಲು ಬಳಸುವ ಇಂಧನದ ಪ್ರಮಾಣ ಕಡಿಮೆ ಆಗುತ್ತದೆ. ಹೀಗಾಗಿ ಇದು ಇಂಧನ ಉಳಿಕೆಗೆ ಸಹಕರಿಸುವ ವಿನ್ಯಾಸ
  • ಉಕ್ಕಿನ ಡಬ್ಬಿಗಿಂತ 5-10 ಪ್ರತಿಶತ ಹೆಚ್ಚು ಭಾರವನ್ನು ತಾಳಿಕೊಳ್ಳುತ್ತದೆ
  • ಈ ಅಲುಮಿನಿಯಂ ರೈಲು ಡಬ್ಬಿಗಳನ್ನು ಹಿಂಡಾಲ್ಕೊ ತನ್ನ ಒಡಿಶಾದ ಕಾರ್ಖಾನೆಯಲ್ಲಿ ತಯಾರಿಸಿದೆ. ಇದು ಸಂಪೂರ್ಣ ಭಾರತ ನಿರ್ಮಿತ.
  • ಮುಂಬರುವ ದಿನಗಳಲ್ಲಿ ಭಾರತ ರೈಲಿನ ಮೂಲಕ ನಡೆಸುವ ಸರಕು ಸಾಗಣೆ ಪ್ರಮಾಣ ಹೆಚ್ಚಲಿದೆ. ವೆಚ್ಚ ಹಾಗೂ ಪರಿಸರ ಸ್ನೇಹಿ ಎರಡೂ ನಿಟ್ಟಿನಲ್ಲಿ ಅಲುಮಿನಿಯಂ ರೈಲು ಡಬ್ಬಿಗಳು ವರದಾನ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!