Friday, August 19, 2022

Latest Posts

2024 ರೊಳಗೆ ಭಾರತೀಯ ರಸ್ತೆಗಳು ಅಮೆರಿಕ ಗುಣಮಟ್ಟಕ್ಕೆ :ನಿತಿನ್ ಗಡ್ಕರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನಿಧಿಯ ಕೊರತೆ ಇಲ್ಲ. 2024ರೊಳಗೆ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತದ ರಸ್ತೆ ಮೂಲಸೌಕರ್ಯ ಅಮೆರಿಕದ ಮಟ್ಟದಲ್ಲಿರಲಿದ್ದು,ಗುಣಮಟ್ಟದಲ್ಲಿ ಉತ್ತಮವಾಗಿರಲಿವೆ ಎಂಬುದಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಬುಧವಾರ ಹೇಳಿದ್ದಾರೆ.
ಸಂಸತ್ತಿನ ಮುಂಗಾರು ಅವೇಶನದ ಭಾಗವಾಗಿ ರಾಜ್ಯಸಭೆಯಲ್ಲಿ ಅವರು ಮಾತನಾಡಿ, ಮುಂದಿನ ಮೂರು ವರ್ಷಗಳಲ್ಲಿ ಕೇಂದ್ರ ಸರಕಾರವು ದೇಶದಲ್ಲಿ 26 ಹಸಿರು ಎಕ್ಸ್‌ಪ್ರೆಸ್ ಹೆದ್ದಾರಿಗಳನ್ನು ನಿರ್ಮಿಸಲಿದೆ. 2024ರಲ್ಲಿ ಭಾರತೀಯ ರಸ್ತೆ ಮೂಲಸೌಕರ್ಯಗಳು ಖಂಡಿತ ಅಮೆರಿಕದಲ್ಲಿರುವಂತೆ ಉತ್ತಮ ಗುಣಮಟ್ಟಕ್ಕೇರಲಿವೆ.ಅಷ್ಟೇ ಏಕೆ, ಅದಕ್ಕಿಂತಲೂ ಉತ್ತಮ ಗುಣಮಟ್ಟ ತೋರಲಿವೆ ಎಂಬುದಾಗಿ ನುಡಿದರು.
ಅವರು ಪ್ರಶ್ನೋತ್ತರ ಅವಯಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ)ಕ್ಕೆ ಯಾವುದೇ ನಿಧಿಯ ಕೊರತೆ ಇಲ್ಲ. ಇದು ಆರ್ಥಿಕವಾಗಿ ಅತ್ಯಂತ ಸದೃಢವಾಗಿದ್ದು, ’AAA’ರೇಟಿಂಗ್ ಹೊಂದಿದೆ ಎಂದು ಬೊಟ್ಟು ಮಾಡಿದರು.ವರ್ಷಕ್ಕೆ ಎನ್‌ಎಚ್‌ಎಐ 5ಲಕ್ಷ ಕಿ.ಮೀ.ರಸ್ತೆ ನಿರ್ಮಿಸುವ ಸಾಮರ್ಥ್ಯ ಹೊಂದಿದೆ .ಮುಂದಿನ ಮೂರು ವರ್ಷಗಳಲ್ಲಿ ನೀವು ದಿಲ್ಲಿಯಿಂದ ಡೆಹ್ರಾಡೂನ್ ಅಥವಾ ಹರಿದ್ವಾರ, ಜೈಪುರಕ್ಕೆ ಎರಡು ಗಂಟೆಗಳಲ್ಲಿ ತಲುಪಬಹುದಾಗಿದೆ.ಹಾಗೆಯೇ ಎಕ್ಸ್‌ಪ್ರೆಸ್ ಹೆದ್ದಾರಿ ನಿರ್ಮಾ ಣದ ಬಳಿಕ ದಿಲ್ಲಿಯಿಂದ ಚಂಡೀಗಢಕ್ಕೆ 2.5ಗಂಟೆಗಳಲ್ಲಿ ತಲುಪಬಹುದು.ದಿಲ್ಲಿಯಿಂದ ಅಮೃತಸರಕ್ಕೆ 4 ಗಂಟೆಗಳಲ್ಲಿ , ದಿಲ್ಲಿಯಂದ ಕಾತ್ರಾಕ್ಕೆ 6 ಗಂಟೆ, ದಿಲ್ಲಿಯಿಂದ ಶ್ರೀನಗರಕ್ಕೆ 8 ಗಂಟೆ, ದಿಲ್ಲಿಯಿಂದ ಮುಂಬೈಗೆ 12 ಗಂಟೆ, ಚೆನ್ನೈಯಿಂದ ಬೆಂಗಳೂರಿಗೆ ಕೇವಲ 2 ಗಂಟೆಗಳಲ್ಲಿ ತಲುಪಲು ಸಾಧ್ಯವಾಗಲಿದೆ ಎಂದು ಅವರು ವಿವರಿಸಿದರು.
ಈ ಹಿಂದೆ ಮೀರತ್‌ನಿಂದ ದಿಲ್ಲಿಗೆ 4.5ಗಂಟೆ ಬೇಕಾಗಿದ್ದರೆ, ಈಗ 40ನಿಮಿಷಗಳಲ್ಲಿ ತಲುಪಲು ಸಾಧ್ಯವಿದೆ ಎಂಬುದನ್ನು ಬೊಟ್ಟು ಮಾಡಿದರು.ನಾವೀಗ ದೇಶದಲ್ಲಿನ ಮೂಲಸೌಕರ್ಯಗಳನ್ನು ಆಮೂಲಾಗ್ರವಾಗಿ ಅಭಿವೃದ್ಧಿಪಡಿಸುತ್ತಿದ್ದೇವೆ ಎಂಬುದಾಗಿ ನಿತಿನ್ ಗಡ್ಕರಿ ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!