ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ನಡೆಯುತ್ತಿರುವ ಸೆಮಿ ಕಂಡಕ್ಟರ್ ಪ್ರದರ್ಶನದಲ್ಲಿ ಕೆಲವು ಭಾರತೀಯ ಕಂಪೆನಿಗಳು ಗಮನ ಸೆಳೆಯುತ್ತಿವೆ. ಅವುಗಳಲ್ಲಿ ಗಮನಾರ್ಹರ ಪಟ್ಟಿ ಇಲ್ಲಿದೆ ನೋಡಿ.
• ಸಿಗ್ನಲ್‌ಚಿಪ್ – ಇದು ಭಾರತದ ಫ್ಯಾಬ್ಲೆಸ್ ಸೆಮಿಕಂಡಕ್ಟರ್ ಕಂಪನಿ . 5G NR, 4G LTE ಮತ್ತು 3G WCDMA ಗಳಲ್ಲಿ ಬಳಸಬಹುದಾದ ಭಾರತದ ಮೊದಲ ಚಿಪ್ ಸೆಟ್ “ಆಗುಂಬೆ”ಯನ್ನು ರಚಿಸಿದೆ.
• ಸಾಂಖ್ಯ ಲ್ಯಾಬ್ಸ್ – ಉಪಗ್ರಹ ಸಂವಹನ ಉತ್ಪನ್ನಗಳು, 5G ಬ್ರಾಡ್‌ಕಾಸ್ಟ್, ಮತ್ತು ನೂತನ ಸೆಮಿಕಂಡಕ್ಟರ್ ಉತ್ಪನ್ನಗಳನ್ನು ಪ್ರದರ್ಶಿಸುತ್ತಿದೆ.
•ಟೆಸ್ಸಾಲ್ವ್ – ಪ್ರಪಂಚದಾದ್ಯಂತ 2500ಕ್ಕೂ ಹೆಚ್ಚು ಇಂಜಿನಿಯರ್‌ಗಳನ್ನು ಹೊಂದಿರುವ ಪ್ರಮುಖ ಎಂಜಿನಿಯರಿಂಗ್ ಪರಿಹಾರ ಪೂರೈಕೆದಾರ. ಸಿಲಿಕಾನ್ ಗೆ ಸಂಬಂಧಿಸಿದ ಸಿಸ್ಟಮ್ಸ್ ಮತ್ತು ಟೆಸ್ಟಿಂಗ್ ಲ್ಯಾಬ್‌ಗಳು ಸೇರಿದಂತೆ ಪೂರ್ಣ ಪ್ರಮಾಣದ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಸಾಮರ್ಥ್ಯಗಳನ್ನು ಹೊಂದಿದೆ. ಸಿಲಿಕಾನ್ ಚಿಪ್ ನ ಉತ್ಪನ್ನಕ್ಕೂ ಪೂರ್ವದ ಹಾಗೂ ನಂತರದ ಪ್ರಕ್ರಿಯೆಯಲ್ಲಿ ಪರಿಣಿತಿ ಹೊಂದಿರುವ ಈ ಕಂಪೆನಿಯು ಎಲ್ಲ ಸಮಸ್ಯೆಗಳಿಗೆ ಸಿಂಗಲ್ ಸ್ಟಾಪ್ ಪರಿಹಾರ ಒದಗಿಸುತ್ತದೆ.
•ಮೋಸ್ ಚಿಪ್ – ಮೊದಲ ಫ್ಯಾಬ್ಲೆಸ್ ಸೆಮಿಕಂಡಕ್ಟರ್ ಕಂಪನಿ. ಪ್ರಮುಖ ಘಟಕಗಳಲ್ಲಿ ತಯಾರಾಗುವ ಲಕ್ಷಾಂತರ ಸಂಪರ್ಕ ಆಧಾರಿತ ಉತ್ಪನ್ನಗಳನ್ನು ಅಭಿವೃದ್ದಿ ಪಡಿಸಿದೆ. ಈ ಕಂಪನಿಯು ಅನಲಾಗ್, ಮಿಶ್ರ-ಸಿಗ್ನಲ್ ವಿನ್ಯಾಸ, ಹೈ-ಸ್ಪೀಡ್ ಸೀರಿಯಲ್ ಇಂಟರ್‌ಫೇಸ್‌ಗಳು, ಸೀರಿಯಲೈಸರ್&ಡೀಸಿರಿಯಲೈಸರ್ ಗಳಲ್ಲಿ 16Gbps ವರೆಗಿನ ಐಪಿಪೋರ್ಟ್‌ಫೋಲಿಯೊ ಗಳಲ್ಲಿ ಪರಿಣಿತಿ ಹೊಂದಿದೆ.
• ಇನ್ಫಿನಿಯೋನ್- ಆಟೋಮೋಟಿವ್, ವಿದ್ಯುನ್ಮಾನ ಕೈಗಾರಿಕೆಗಳು, ಸಂವಹನ ಮತ್ತು ಮಾಹಿತಿ ತಂತ್ರಜ್ಞಾನಗಳು ಮತ್ತು ಸೆನ್ಸಾರ್ ಮತ್ತು ಭದ್ರತೆಯ ಕ್ಷೇತ್ರಗಳಿಗೆ ಅಗತ್ಯವಿರುವ ಸೆಮಿನಕಂಡಕ್ಟರ್ಗಳ ವಿನ್ಯಾಸ, ಅಭಿವೃದ್ಧಿ, ತಯಾರಿಕೆ ಮತ್ತು ಮಾರಾಟ ಮಾಡುತ್ತದೆ.