ಸಖತ್‌ ವೈರಲ್‌ ಆಗ್ತಿದೆ ಟ್ರಾಫಿಕ್‌ ಜಾಮ್‌ನಲ್ಲಿ ರೈಲು ಸಿಲುಕಿರುವ ವಿಡಿಯೋ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಟ್ರಾಫಿಕ್ ಜಾಮ್..ಇದು ನಗರವಾಸಿಗಳ ದಿನನಿತ್ಯದ ಸಮಸ್ಯೆ. ಬೈಕ್ ನಲ್ಲಿ ಹೋದರೂ, ಕಾರಿನಲ್ಲಿ ಹೋದರೂ, ಆಟೋದಲ್ಲಿ ಹೋದರೂ, ಕೊನೆಗೆ ಸೈಕಲ್ ನಲ್ಲಿ ಹೋದರೂ ನಗರವಾಸಿಗಳು ಟ್ರಾಫಿಕ್ ಸಮಸ್ಯೆ ಎದುರಿಸುತ್ತಿರುವುದು ಸರ್ವೇ ಸಾಮಾನ್ಯ. ರಸ್ತೆ ಮೇಲೆ ಸಂಚರಿಸುವ ವಾಹನಗಳಿಗೆ ಟ್ರಫಿಕ್‌ ಜಾಮ್‌ ತಪ್ಪಿದ್ದಲ್ಲ, ಆದರೆ, ರೈಲು ಕೂಡ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಳ್ಳೊದನ್ನು ಎಂದಾದರೂ ಕಂಡಿದ್ದೀರಾ? ಆಶ್ಚರ್ಯ ಅನಿಸಿದರೂ ಇದು ನಿಜ ಕಣ್ರೀ ಉತ್ತರಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಉತ್ತರ ಪ್ರದೇಶದ ಬನಾರಸ್ ನಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಬನಾರಸ್‌ನ ರೈಲ್ವೆ ಗೇಟ್ ಬಳಿ ಟ್ರಾಫಿಕ್ ಜಾಮ್ ಆಗಿದೆ. ರೈಲು ಬರುತ್ತಿದ್ದರೂ ಯಾರೂ ಕ್ಯಾರೇ ಎನ್ನದೆ ಜನ ತಮ್ಮ ವಾಹನಗಳನ್ನು ರೈಲ್ವೇ ಹಳಿ ಮೇಲೆ ಓಡಿಸಿದ್ದಾರೆ. ಇದರಿಂದ ಲೊಕೊ ಪೈಲಟ್ ಬ್ರೇಕ್‌ ಹಾಕಿ ರೈಲು ನಿಲ್ಲಿಸಿದ ಘಟನೆ ನಡೆದಿದೆ. ಹಾರ್ನ್‌ ಮಾಡುತ್ತಿದ್ದರೂ ಕಿವಿಗೊಡದೆ ನಿಲ್ಲಿಸಿದರೂ ವಾಹನ ಸವಾರರು ಹಳಿ ದಾಟುತ್ತಲೇ ಇದ್ದರು.

ಟ್ರಾಫಿಕ್ ಪೊಲೀಸರು ಬಂದು ಟ್ರಾಫಿಕ್ ಕ್ಲಿಯರ್ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಭಾರತದಲ್ಲಿ ರೈಲುಗಳು ಕೂಡ ಟ್ರಾಫಿಕ್ ಸಮಸ್ಯೆಗಳನ್ನು ಎದುರಿಸುತ್ತವೆ ಎಂಬುದಕ್ಕೆ ಇದು ಒಂದು ಉದಾಹರಣೆಯಾಗಿದೆ ಹೇಳಲೇಬೇಕು..ರೈಲು ಕೂಡ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಹಾಕಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!