ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೀನಾದ ಏಷ್ಯನ್ ಗೇಮ್ಸ್‌ನಲ್ಲಿ ಆರಂಭಿಕ ಪಂದ್ಯದಲ್ಲೇ ಭಾರತ ಮಹಿಳಾ ಹಾಕಿ ತಂಡ ಭರ್ಜರಿ ಜಯಗಳಿಸಿದೆ.
ಭಾರತ ಮಹಿಳಾ ಹಾಕಿ ತಂಡವು ಸಿಂಗಾಪುರವನ್ನು 13-0 ಅಂತರದಿಂದ ಸೋಲಿಸಿದೆ. ಈ ಮೂಲಕ ಭಾರತೀಯ ಮಹಿಳಾ ಹಾಕಿ ತಂಡವು ತನ್ನ ಅಭಿಯಾನಕ್ಕೆ ಉತ್ತಮ ಆರಂಭವನ್ನು ನೀಡಿದೆ.
ಈ ಆಟದ ಮೊದಲ ಪಂದ್ಯದಲ್ಲಿ ಮಲೇಷ್ಯಾ 8-0 ಗೋಲುಗಳಿಂದ ಹಾಂಗ್ ಕಾಂಗ್ ತಂಡವನ್ನು ಸೋಲಿಸಿತು. ೆರಡನೇ ಪಂದ್ಯದಲ್ಲಿ ದಕ್ಷಿಣ ಕೊರಿಯಾ 4-0 ಗೋಲುಗಳಿಂದ ಸಿಂಗಾಪುರವನ್ನು ಮಣಿಸಿತು. ಈಗ ಭಾರತ ತಂಡವು ಸಿಂಗಾಪುರವನ್ನು 13-0 ಅಂತರದಿಂದ ಹಿಂದಿಕ್ಕಿದೆ.
ಸಿಂಗಾಪುರದ ವಿರುದ್ಧ ಅಮೋಘ ಗೆಲುವು ಸಾಧಿಸಿದ ಭಾರತದ ತಂಡ ಗ್ರೂಪ್ ಫಿಕ್ಸ್ಚರ್ನಲ್ಲಿ ಅಗ್ರಸ್ಥಾನಕ್ಕೆ ಬಂದಿದ್ದು, ಮುಂದಿನ ಮಂದ್ಯದಲ್ಲಿ ಮಲೇಷ್ಯಾವನ್ನು ಎದುರಿಸಲಿದೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್ಗೆ ಎಂಟ್ರಿ ಕೊಡಲಿದ್ದು, ಭಾರತವು ಟೂರ್ನಿಯಲ್ಲಿ ಮುನ್ನಡೆ ಸಾಧಿಸುವ ಗುರಿಯತ್ತ ಸಾಗಿದೆ.