October 10, 2026
Saturday, October 10, 2026
spot_img

ಹಂಟಾ ವೈರಸ್ ಪೀಡಿತ ಹಡಗಿನಲ್ಲಿದ್ದ ಭಾರತೀಯರು ಸ್ಪೇನ್‌ನಿಂದ ನೆದರ್‌ಲೆಂಡ್‌ಗೆ ಶಿಫ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹಂಟಾ ವೈರಸ್‌ ಪೀಡಿತ ಕ್ರೂಸ್‌ನಲ್ಲಿ ಇಬ್ಬರು ಭಾರತೀಯರನ್ನು ನೆದರ್‌ಲೆಂಡ್‌ಗೆ ಸ್ಥಳಾಂತರಿಸಲಾಗಿದೆ.

ಭಾನುವಾರ ಸ್ಪೇನ್‌ ತಲುಪಿದ್ದ ಕ್ರೂಸ್‌ ಇದಾಗಿದ್ದು, ಡಬ್ಲೂಎಚ್‌ಒ ಪ್ರೋಟೋಕಾಲ್‌ ಅನುಸರಿಸಿ ಇದರಲ್ಲಿದ್ದ ಇಬ್ಬರು ಭಾರತೀಯ ಪ್ರಜೆಗಳನ್ನು ನೆದರ್‌ಲೆಂಡ್‌ಗೆ ಶಿಫ್ಟ್‌ ಮಾಡಲಾಗಿದೆ.

ಭಾರತೀಯ ಪ್ರಜೆಗಳಿಬ್ಬರ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಕಾಣಿಸಿಲ್ಲ. ಆದರೆ ಮೇಲ್ವಿಚಾರಣೆಗಾಗಿ ಅವರನ್ನು ನೆದರ್‌ಲೆಂಡ್‌ಗೆ ಕಳುಹಿಸಲಾಗಿದೆ. ಇದೀಗ ಸ್ಪೇನ್‌ನ ಭಾರತೀಯ ರಾಯಭಾರಿ ಸ್ಪ್ಯಾನಿಷ್‌ ಅಧಿಕಾರಿಗಳು ಭಾರತೀಯರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿ ಇದ್ದಾರೆ.

Must Read