ವಿಶ್ವ ಚೆಸ್‌ ಛಾಂಫಿಯನ್‌ ವಿರುದ್ಧ ಹ್ಯಾಟ್ರಿಕ್‌ ಗೆಲುವು: ಭಾರತದ 17 ವರ್ಷದ ಪ್ರಜ್ಞಾನಂದನ ಸಾಧನೆ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತದ ಕಿರಿಯ 17 ವರ್ಷದ ಚೆಸ್‌ ಪ್ರತಿಭೆ ಆರ್.‌ ಪ್ರಜ್ಞಾನಂದ, ಸೋಮವಾರ ಬೆಳಿಗ್ಗೆ ಮಿಯಾಮಿಯಲ್ಲಿ ನಡೆದ ಅಂತಾರಾಷ್ಟ್ರೀಯ ಚೆಸ್ ಚಾಂಪಿಯನ್‌ಶಿಪ್‌ನ ಎಫ್‌ಟಿಎಕ್ಸ್ ಕ್ರಿಪ್ಟೋ ಕಪ್‌ನ ಕೊನೆಯ ಸುತ್ತಿನಲ್ಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸೆನ್ ಅವರನ್ನು ಸೋಲಿಸಿ ಮತ್ತೊಮ್ಮೆ ಹೊಸ ದಾಖಲೆ ಬರೆದಿದ್ದಾನೆ.

ಆ ಮೂಲಕ ಐದು ಬಾರಿ ವಿಶ್ವ ಚೆಸ್‌ ಛಾಂಪಿಯನ್‌ ಆಗಿರುವ ನಾರ್ವೆಯ ಶ್ರೇಷ್ಠ ಆಟಗಾರ ಮ್ಯಾಗ್ನಸ್ ಕಾರ್ಲ್‌ಸೆನ್ ವಿರುದ್ಧ ಸತತವಾಗಿ ಮೂರನೇ ಗೆಲುವು ಸಾಧಿಸಿದ್ದಾನೆ. ಈ ಹಿಂದೆಯೂ ಕೂಡ 17 ವರ್ಷದ ಬಾಲಕ ಪ್ರಜ್ಞಾನಂದ ಎರಡು ಬಾರಿ ವಿಶ್ವ ಚೆಸ್‌ ಛಾಂಪಿಯನ್‌ ಕಾರ್ಲ್‌ಸೆನ್‌ ಅವರನ್ನು ಸೋಲಿಸಿದ್ದ.

ಈ ಹಿಂದೆ ಈ ವರ್ಷದ ಫೆಬ್ರವರಿಯಲ್ಲಿ ಆನ್‌ಲೈನ್ ಚೆಸ್ ಪಂದ್ಯದಲ್ಲಿ ಕಾರ್ಲ್‌ಸನ್‌ ಅವರಿಗೆ ಸೋಲುಣಿಸಿದ್ದ. ಆಗಿನ್ನೂ ಆತನಿಗೆ ಕೇವಲ 16 ವರ್ಷ. ಈ ವರ್ಷ ಮೇ ತಿಂಗಳಲ್ಲಿಯೂ ಚೆಸ್ಸಬಲ್ ಮಾಸ್ಟರ್ಸ್ ಆನ್‌ಲೈನ್ ರ್ಯಾಪಿಡ್ ಚೆಸ್ ಪಂದ್ಯಾವಳಿಯಲ್ಲಿ ಕಾರ್ಲ್‌ಸೆನ್ ಅವರನ್ನು ಸೋಲಿಸಿದ್ದ. ಪ್ರಸ್ತುತ ಎಫ್‌ಟಿಎಕ್ಸ್ ಕ್ರಿಪ್ಟೋ ಕಪ್‌ನ ಕೊನೆಯ ಸುತ್ತಿನಲ್ಲಿ ಮತ್ತೊಮ್ಮೆ ಕಾರ್ಲ್‌ಸನ್‌ ಅವರನ್ನು ಸೋಲಿಸುವ ಮೂಲಕ ವಿಶ್ವ ಛಾಂಫಿಯನ್‌ ವಿರುದ್ಧ ಪ್ರಜ್ಞಾನಂದ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದಾನೆ.

ಪಂದ್ಯವನ್ನು ಗೆದ್ದರೂ ಚಾಂಪಿಯನ್‌ಶಿಪ್‌ನಲ್ಲಿ ಪ್ರಜ್ಞಾನಂದ ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಏಕೆಂದರೆ ಕಾರ್ಲ್‌ಸೆನ್ ಹಿಂದಿನ ಆಟಗಳ ಆಧಾರದ ಮೇಲೆ ಹೆಚ್ಚಿನ ಸ್ಕೋರ್ ಹೊಂದಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!