2023ರಲ್ಲಿ ಎರಡಂಕಿ ಬೆಳವಣಿಗೆ ದಾಖಲಿಸಲಿದೆ ಭಾರತದ ಕೃಷಿರಾಸಾಯನಿಕ ಉದ್ಯಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
2023ನೇ ಆರ್ಥಿಕ ವರ್ಷದಲ್ಲಿ ಭಾರತದ ಕೃಷಿ ರಾಸಾಯನಿಕ ಉದ್ಯಮವು 15-17ಶೇಕಡಾ ಬೆಳವಣಿಗೆಯಾಗಲಿದೆ. ಸ್ಥಿರವಾದ ದೇಶೀಯ ಬೇಡಿಕೆ ಹಾಗೂ ರಫ್ತುಗಳಲ್ಲಿನ ಬಲವಾದ ಏರಿಕೆಗಳಿಂದಾಗಿ ಭಾರತದ ಕೃಷಿ ರಾಸಾಯನಿಕ ಉದ್ದಿಮೆಯು ಬೆಳವಣಿಗೆಯಾಗಲಿದೆ ಎಂದು ಸಂಶೋಧನಾ ಸಂಸ್ಥೆ ಕ್ರಿಸಿಲ್‌ನ ವರದಿ ಹೇಳಿದೆ. 2022 ರ ಆರ್ಥಿಕ ವರ್ಷದಲ್ಲಿ ಈ ವಲಯವು 23% ಏರಿಕೆ ದಾಖಲಿಸಿತ್ತು.

ಜಾಗತಿಕ ಹೂಡಿಕೆದಾರರ ಚೀನಾ+೧ ನೀತಿಯಿಂದಾಗಿ ಭಾರತವು ಲಾಭ ಪಡೆಯಲಿದ್ದು 2024ರಲ್ಲಿಯೂ ಈ ಬೆಳವಣಿಗೆ ಮುಂದುವರೆದು ಉದ್ಯಮದ ಆದಾಯವು 10 ರಿಂದ 12 ಶೇಕಡಾದಷ್ಟು ವಿಸ್ತರಣೆಯಾಗಲಿದೆ. ಜೊತೆಗೆ ಹಲವಾರು ಪ್ರಮುಖ ರಾಸಾಯನಿಕ ವಸ್ತುಗಳ ಮೇಲಿನ ಪೇಟೆಂಟ್‌ ಕೂಡ ಮುಕ್ತಾಯಗೊಳ್ಳಲಿರುವುದರಿಂದ ಭಾರತದ ಕೃಷಿರಾಸಾಯನಿಕ ಉದ್ದಿಮೆಯು ಮತ್ತಷ್ಟು ಬೆಳವಣಿಗೆ ದಾಖಲಿಸಲಿದೆ ಎಂದು ವರದಿ ಉಲ್ಲೇಖಿಸಿದೆ.

ಈ ಹಣಕಾಸು ವರ್ಷದಲ್ಲಿ ರಫ್ತು ಆದಾಯವು 18-20 ಶೇಕಡಾ ಏರಿಕೆಯಾಗಿದೆ. ಅಲ್ಲದೇ ಜಾಗತಿಕ ಆಟಗಾರರು ಚೀನಾದ ಮೇಲಿನ ಅವಲಂಬನೆ ಕಡಿಮೆ ಮಾಡುತ್ತಿರುವುದರಿಂದ ರಫ್ತಿನ ಪರಿಮಾಣ ಏರಿಕೆಯಾಗುತ್ತಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ರಫ್ತು 10-12 ಶೇಕಡಾದಷ್ಟು ಬೆಳವಣಿಗೆಯಾಗಲಿದೆ. ಇದರ ಪರಿಣಾಮವಾಗಿ ರಫ್ತುಗಳು ಕೃಷಿ ರಾಸಾಯನಿಕ ವಲಯದ ಒಟ್ಟು ಆದಾಯದ ಸುಮಾರು 53 ಶೇಕಡಾದಷ್ಟು ಕೊಡುಗೆ ನೀಡಲಿವೆ ಎಂದು ವರದಿ ಉಲ್ಲೇಖಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!