ಹೊಸದಾಗಿ 1,829 ಹೊಸ ಕೋವಿಡ್-19 ಕೇಸ್‌ ಪತ್ತೆ, 33ಮಂದಿ ಸೋಂಕಿಗೆ ಬಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಳೆದ 24 ಗಂಟೆಗಳಲ್ಲಿ 1,829 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿದ್ದು, 33ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಭಾರತದ ಒಟ್ಟು ಸಕ್ರಿಯ ಪ್ರಕರಣಗಳು 15,647, ಇದು ಒಟ್ಟು ಪ್ರಕರಣಗಳ ಶೇಕಡಾ 0.04 ರಷ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ದಿನದ ಪಾಸಿಟಿವಿಟಿ ದರವು ಶೇಕಡಾ 0.42 ರಷ್ಟಿದೆ.  24 ಗಂಟೆಗಳಲ್ಲಿ ಒಟ್ಟು 2,549 ರೋಗಿಗಳು ಚೇತರಿಸಿಕೊಂಡಿದ್ದಾರೆ, ದೇಶಾದ್ಯಂತ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 4,25,87,259 ಕ್ಕೆ ತಲುಪಿದೆ. ಭಾರತದ ಚೇತರಿಕೆಯ ಪ್ರಮಾಣವು ಈಗ 98.75 ಪ್ರತಿಶತದಷ್ಟಿದೆ. ಆರೋಗ್ಯ ಸಚಿವಾಲಯದ ಪ್ರಕಾರ, ಭಾರತವು ಇಲ್ಲಿಯವರೆಗೆ 84.49 ಕೋವಿಡ್ ಪರೀಕ್ಷೆಗಳನ್ನು ನಡೆಸಿದೆ, ಅದರಲ್ಲಿ 4,34,962 ಪರೀಕ್ಷೆಗಳನ್ನು ಕಳೆದ 24 ಗಂಟೆಗಳಲ್ಲಿ ನಡೆಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!