ಫ್ರಾನ್ಸ್ ಜೊತೆಗೂ ಭಾರತ ಡೀಲ್: ಮದ್ಯದ ದೊರೆ ಮಲ್ಯ ಭಾರತಕ್ಕೆ ಹಸ್ತಾಂತರ ಸನ್ನಿಹಿತ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಬ್ಯಾಂಕುಗಳಿಂದ ಕೋಟಿಗಟ್ಟಲೆ ಸಾಲ ಪಡೆದು ವಿದೇಶದಲ್ಲಿ ಅಡಗಿರುವ ಮದ್ಯದ ದೊರೆ ವಿಜಯ್ ಮಲ್ಯ ಭಾರತಕ್ಕೆ ಹಸ್ತಾಂತರವಾಗಲಿದ್ದಾರೆಯೇ?

ಬ್ರಿಟನ್‌ನಿಂದ ಮಲ್ಯ ಭಾರತಕ್ಕೆ ಹಸ್ತಾಂತರವಾಗುವ ಸಾಧ್ಯತೆ ಹೆಚ್ಚಾಗಿರುವ ನಡುವೆಯೇ ತಮ್ಮ ದೇಶಕ್ಕೆ ಮಲ್ಯ ಕಾಲಿಟ್ಟರೆ ವಿಜಯ್ ಮಲ್ಯನನ್ನು ಯಾವುದೇ ಪೂರ್ವ ಷರತ್ತುಗಳಿಲ್ಲದೇ ಹಸ್ತಾಂತರ ಮಾಡಬೇಕು ಎಂದು ಫ್ರಾನ್ಸ್ ಅಧಿಕಾರಿಗಳಿಗೆ ಭಾರತ ಸರಕಾರ ಮನವಿ ಮಾಡಿದ್ದು, ಈ ಬೆಳವಣಿಗೆಗೆ ಪುಷ್ಟಿ ನೀಡಿದೆ.

ಇತ್ತೀಚೆಗೆ ಬಡೆದ ಉಗ್ರ ನಿಗ್ರಹ ಕುರಿತ ಭಾರತ-ಫ್ರಾನ್ಸ್ ಜಂಟಿ ಕಾರ್ಯಪಡೆಯ 16ನೇ ಸಭೆಯಲ್ಲಿ ಭಾರತ ಈ ಕುರಿತು ಪ್ರಸ್ತಾವಿಸಲಾಗಿದ್ದು, ಆರ್ಥಿಕ ಅಪರಾಧ ಪ್ರಕರಣಗಳಲ್ಲಿ ಭಾರತಕ್ಕೆ ಬೇಕಿರುವ ವಿಜಯ್ ಮಲ್ಯ ಬ್ರಿಟನ್‌ನಲ್ಲಿ ನೆಲೆಸಿದ್ದಾರೆ. ಅವರ ಹಸ್ತಾಂತರ ಪ್ರಕ್ರಿಯೆ ಆರಂಭವಾಗಿದೆ. ಈ ನಡುವೆ ಒಂದು ವೇಳೆ ಮಲ್ಯ ಫ್ರಾನ್ಸ್‌ಗೆ ತೆರಳಿದರೆ ಷರತ್ತುಗಳಿಲ್ಲದೆ ಅವರನ್ನು ಹಸ್ತಾಂತರಿಸಬೇಕು ಎಂದು ಭಾರತ ಹೇಳಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪ್ರಸ್ತುತ ಮಲ್ಯ ಬ್ರಿಟನ್‌ನಲ್ಲಿದ್ದಾರೆ. ಆದರೆ ಅವರು ಫ್ರಾನ್ಸ್‌ನಲ್ಲೂ ಅವರು ಆಸ್ತಿ ಹೊಂದಿದ್ದಾರೆ. ಹೀಗಾಗಿ ಬೇರೆ ದೇಶಕ್ಕೆ ಪಲಾಯನ ಮಾಡದಂತೆ, ಅವರು ಆಸ್ತಿ ಹೊಂದಿರುವ ದೇಶಗಳ ಜತೆಗೆ ಗಡೀಪಾರು ಕುರಿತು ಭಾರತ ಈಗಾಗಲೇ ಮಾತುಕತೆ ನಡೆಸುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!