ಹೊಸದಿಗಂತ ಡಿಜಿಟಲ್ ಡೆಸ್ಕ್:
2023-24ರ ಆರ್ಥಿಕ ವರ್ಷದಲ್ಲಿ ಭಾರತದ ರಕ್ಷಣಾ ಉತ್ಪಾದನಾ ವಲಯವು ಶೇ 16.8 ರಷ್ಟು ಏರಿಕೆ ಕಂಡಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಘೋಷಿಸಿದ್ದಾರೆ. ಈ ಮಹತ್ವದ ಏರಿಕೆಯು ದೇಶದ ರಕ್ಷಣಾ ಉತ್ಪಾದನಾ ಮೌಲ್ಯದಲ್ಲಿ ಇದುವರೆಗಿನ ಅತ್ಯಧಿಕ ಬೆಳವಣಿಗೆಯನ್ನು ಸೂಚಿಸುತ್ತದೆ ಎಂದು ತಿಳಿಸಿದ್ದಾರೆ.
ರಕ್ಷಣಾ ಉತ್ಪಾದನೆಯ ಒಟ್ಟು ಮೌಲ್ಯವು ಈ ವರ್ಷ ₹1,26,887 ಕೋಟಿಗೆ ತಲುಪಿದೆ, ಹಿಂದಿನ ವರ್ಷದ ಅಂಕಿಅಂಶಗಳಿಗಿಂತ ಹೆಚ್ಚಾಗಿದೆ ಎಂದು ರಾಜನಾಥ್ ಸಿಂಗ್ ಮಾಹಿತಿ ನೀಡಿದರು.
“ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮೇಕ್ ಇನ್ ಇಂಡಿಯಾ ಕಾರ್ಯಕ್ರಮವು ವರ್ಷದಿಂದ ವರ್ಷಕ್ಕೆ ಹೊಸ ಮೈಲಿಗಲ್ಲುಗಳನ್ನು ದಾಟುತ್ತಿದೆ. ಭಾರತವು 2023-24ರಲ್ಲಿ ರಕ್ಷಣಾ ಉತ್ಪಾದನೆಯ ಮೌಲ್ಯದಲ್ಲಿ ಅತ್ಯಧಿಕ ಬೆಳವಣಿಗೆಯನ್ನು ದಾಖಲಿಸಿದೆ. ಉತ್ಪಾದನೆಯ ಮೌಲ್ಯವು 2023-24ರಲ್ಲಿ 1,26,887ರೂ. ಕೋಟಿ, ಇದು ಹಿಂದಿನ ಹಣಕಾಸು ವರ್ಷದ ಉತ್ಪಾದನೆಯ ಮೌಲ್ಯಕ್ಕಿಂತ 16.8% ಹೆಚ್ಚಾಗಿದೆ” ಎಂದು ರಕ್ಷಣಾ ಸಚಿವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.