ಭಾರತದ ದಕ್ಷ, ಪಾರದರ್ಶಕ ಚುನಾವಣೆಗೆ ಪಾಕ್ ಸದನದಲ್ಲೂ ಸಿಕ್ಕಿತು ಮೆಚ್ಚುಗೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಪಾಕ್ ಲೋಕಸಭೆಯ ವಿರೋಧ ಪಕ್ಷದ ನಾಯಕ ಶಿಬ್ಲಿ ಫರಾಜ್ ಭಾರತವನ್ನು ಸದನದಲ್ಲಿ ಹಾಡಿ ಹೊಗಳಿದ್ದಾರೆ.

ಭಾರತದ ಚುನಾವಣಾ ಆಯೋಗ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆನಡೆಸಿದ ರೀತಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದೀಗ ಶಿಬ್ಲಿ ಫರಾಜ್ ಮಾತುಗಳ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ನಮ್ಮ ನೆರೆಯ ರಾಷ್ಟ್ರ ಭಾರತದಲ್ಲಿ ಇತ್ತೀಚೆಗಷ್ಟೇ ಚುನಾವಣೆ ಮುಕ್ತಾಯವಾಗಿದೆ. ಅಲ್ಲಿ 80 ಕೋಟಿಗೂ ಅಧಿಕ ಮತದಾರರು ಮತದಾನ ಮಾಡಿದ್ದಾರೆ. ಓರ್ವ ಮತದಾರ ಇದ್ರೂ ಅಲ್ಲಿಯ ಚುನಾವಣಾ ಆಯೋಗ ಮತಗಟ್ಟೆ ನಿರ್ಮಿಸಿ ಪೊಲೀಸರನ್ನು ನಿಯೋಜನೆ ಮಾಡಿತ್ತು. ಇವಿಎಂ ಮೂಲಕ ಮತದಾನ ಪ್ರಕ್ರಿಯೆ ನಡೆದಿದ್ದು, ಚುನಾವಣೆ ಬಗ್ಗೆ ಯಾರು ಅಸಮಾಧಾನ ವ್ಯಕ್ತಪಡಿಸಿಲ್ಲ. ನಾವು ಸಹ ಇದೇ ರೀತಿಯಲ್ಲಿ ಅಭಿವೃದ್ಧಿ ಹೊಂದಬೇಕಿದೆ ಎಂದು ಶಿಬ್ಲಿ ಫರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.

https://x.com/MeghUpdates/status/1801167210867745119?ref_src=twsrc%5Etfw

ಪಾಕಿಸ್ತಾನದ ಚುನಾವಣೆ ಪ್ರಕ್ರಿಯೆ ಬಗ್ಗೆ ಅಸಮಾಧಾನ ಹೊರ ಹಾಕಿದ ಶಿಬ್ಲಿ ಫರಾಜ್, ಸೋತ ಅಭ್ಯರ್ಥಿಗಳು ಸೋಲನ್ನು ಒಪ್ಪಿಕೊಳ್ಳಲ್ಲ. ಈ ಗದ್ದಲದಲ್ಲಿ ಗೆದ್ದ ಅಂತೆ ಹೇಳಿಕೊಳ್ಳುವ ಕುರ್ಚಿ ಮೇಲೆ ಬಂದು ಕುಳಿತುಕೊಳ್ಳುತ್ತಾನೆ. ಇಂತಹ ಒಂದು ಪದ್ಧತಿ ದೇಶದ ರಾಜಕೀಯ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಫೆಬ್ರವರಿಯಲ್ಲಿ ನಡೆಸ ಪಾಕಿಸ್ತಾನದ ಚುನಾವಣೆ ಬಗ್ಗೆ ಅಸಮಾಧಾನ ಹೊರ ಹಾಕಿದರು. ನಮ್ಮಲ್ಲಿಯ ಚುನಾವಣೆಗಳು ಆರೋಪ-ಪ್ರತ್ಯಾರೋಪಗಳಲ್ಲಿಯೇ ಕೊನೆಯಾದವು ಎಂದು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬೆಂಬಲಿಗರ ವಿರುದ್ಧ ಕಿಡಿಕಾರಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!