ದೇಶದಲ್ಲೇ ಮೊದಲ ಬಾರಿಗೆ ನದಿಯಡಿ ಸುರಂಗದೊಳಗೆ ಸಾಗಿದ ಮೆಟ್ರೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ದೇಶದಲ್ಲೇ ಮೊದಲ ಬಾರಿಗೆ ನದಿಯಡಿ ಸುರಂಗದೊಳಗೆ ಮೆಟ್ರೋ ರೇಕು ಬುಧವಾರ ಸಂಚರಿಸುವ ಮೂಲಕ ಕೋಲ್ಕತಾ ಮೆಟ್ರೋ ಇತಿಹಾಸ ನಿರ್ಮಿಸಿದೆ ಎಂದು ಮೆಟ್ರೋ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಮೆಟ್ರೋ ರೈಲ್ವೇ ಜನರಲ್‌ ಮ್ಯಾನೇಜರ್‌ ಪಿ. ಉದಯ್‌ ಕುಮಾರ್‌ ರೆಡ್ಡಿ, ಹಿರಿಯ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳು ಮಾತ್ರ ಇದ್ದ ಮೆಟ್ರೋ ರೇಕು ಕೋಲ್ಕತಾದ ಮಹಾ ಕರಣ್‌ ಮೆಟ್ರೋ ನಿಲ್ದಾಣದಿಂದ ಹೊರಟು ಹೂಗ್ಲಿ ನದಿಯಡಿ ಟನಲ್‌ ಮೂಲಕ ಸಾಗಿ ಹೌರಾ ಮೆಟ್ರೋ ನಿಲ್ದಾಣವನ್ನು ತಲುಪಿದೆ.

“ಕೋಲ್ಕತಾ ಮತ್ತು ಸುತ್ತಮುತ್ತಲಿನ ನಾಗರಿಕರಿಗೆ ಅತ್ಯಾಧುನಿಕ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಇದೊಂದು ಕ್ರಾಂತಿಕಾರಕ ಹೆಜ್ಜೆಯಾಗಿದೆ,’ ಎಂದು ಇದೇ ವೇಳೆ ಉದಯ್‌ ಕುಮಾರ್‌ ರೆಡ್ಡಿ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!