CINE| ಮತ್ತೊಬ್ಬ ನಾಯಕಿ ಆಸ್ಪತ್ರೆಗೆ ದಾಖಲು: ಹೋರಾಡುತ್ತಿರುವುದಾಗಿ ನಟಿ ಪೋಸ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿಶಾಖ ಸಿಂಗ್ ತೆಲುಗು ಚಿತ್ರ ಜ್ಞಾಪಕಂ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಆ ನಂತರ ಹಿಂದಿ ಮತ್ತು ತಮಿಳಿನಲ್ಲಿ ಹೆಸರು ಮಾಡಿದ್ದಾರೆ. ಈ ನಡುವೆ ತೆಲುಗಿನಲ್ಲಿ ನಾರಾ ರೋಹಿತ್ ಜೊತೆ ರೌಡಿ ಫೆಲೋ ಎಂಬ ಸಿನಿಮಾ ಮಾಡಿದರು. ಅದು ತೆಲುಗಿನಲ್ಲಿ ಎರಡು ಚಿತ್ರ ಬಿಟ್ಟರೆ ಮತ್ತೆ ಕಾಣಿಸಿಕೊಂಡಿರಲಿಲ್ಲ. ತಮಿಳು ಮತ್ತು ಹಿಂದಿಯಲ್ಲಿ ಸಿನಿಮಾ ಮಾಡುತ್ತಿರುವ ಈಕೆ ಕೊನೆಯದಾಗಿ 2017ರಲ್ಲಿ ಹಿಂದಿ ಸಿನಿಮಾ ಮೂಲಕ ಪ್ರೇಕ್ಷಕರನ್ನು ಸ್ವಾಗತಿಸಿದ್ದರು.

ವಿಶಾಖಾ ಸಿಂಗ್ ಅವರು ಆರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಪೋಸ್ಟ್‌ ಹಾಕಿದ್ದಾರೆ. ವಿಶಾಖಾ ಇತ್ತೀಚೆಗೆ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಆಸ್ಪತ್ರೆಯ ಬೆಡ್‌ ಮೇಲೆ ಮಲಗಿರುವ ಫೋಟೋಗಳನ್ನು ಹಾಕಿ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.

ಪೋಸ್ಟ್‌ನಲ್ಲಿ ಚಳಿಗಾಲ ಮತ್ತು ವಸಂತಕಾಲದಲ್ಲಿ ನಾನು ವಿಚಿತ್ರ ಘಟನೆಗಳು, ಅಪಘಾತಗಳು ಮತ್ತು ಅನಾರೋಗ್ಯವನ್ನು ಅನುಭವಿಸಿದ್ದೇನೆ. ಬೇಸಿಗೆ ಬಂದಾಗ ನನ್ನ ಆರೋಗ್ಯ ಸರಿಹೋಗುತ್ತದೆ. ಏಪ್ರಿಲ್ ನನಗೆ ಯಾವಾಗಲೂ ಹೊಸ ವರ್ಷದಂತೆ ಭಾಸವಾಗುತ್ತದೆ. ಬಹುಶಃ ಹೊಸ ಆರ್ಥಿಕ ವರ್ಷ ಅಥವಾ ನಾನು ಹುಟ್ಟಿದ ತಿಂಗಳಿನಿಂದಾಗಿ ಬೇಸಿಗೆ ಕಾಲ ಬಂತೆಂದರೆ ಮತ್ತೆ ನನ್ನ ಆರೋಗ್ಯ ಸುಧಾರಿಸಿ ಪೂರ್ಣ ಉತ್ಸಾಹದಿಂದ ಮುನ್ನಡೆಯುತ್ತೇನೆ. ಈ ಪೋಸ್ಟ್‌ ನೋಡಿದ ಅಭಿಮಾನಿಗಳು, ಸೆಲೆಬ್ರಿಟಿಗಳು ಶೀಘ್ರದಲ್ಲೇ ಚೇತರಿಸಿಕೊಳ್ಳಲಿ ಎಂದು ಹರಸಿದ್ದಾರೆ.

https://www.instagram.com/p/Cq23L24S66c/?utm_source=ig_web_copy_link

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!