562 ಬಿಲಿಯನ್‌ ಡಾಲರ್‌ಗೆ ಕುಸಿದ ಭಾರತದ ವಿದೇಶಿ ವಿನಿಮಯ ಸಂಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಡಿಸೆಂಬರ್‌ ನಲ್ಲಿ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹವು 691 ಮಿಲಿಯನ್‌ ಡಾಲರ್‌ ಕಡಿಮೆಯಾಗಿ 562.808 ಬಿಲಿಯನ್‌ ಡಾಲರ್‌ ಗೆ ಕುಸಿದಿದೆ ಎಂದು ಆರ್‌ಬಿಐ ಬಿಡುಗಡೆ ಮಾಡಿದ ಅಂಕಿ ಅಂಶಗಳು ತೋರಿಸಿವೆ.

ಈ ವಾರದ ಮೊದಲು, ವಿದೇಶಿ ವಿನಿಮಯ ಸಂಗ್ರಹವು ಮೀಸಲು 571 ಮಿಲಿಯನ್‌ ಡಾಲರ್‌ ಕಡಿಮೆಯಾಗಿ 563.499 ಬಿಲಿಯನ್‌ ಡಾಲರ್‌ ಗೆ ಕುಸಿದಿತ್ತು. ಫೆಡ್‌ ಬಡ್ಡಿದರ ಹೆಚ್ಚಳ, ಹಣದುಬ್ಬರ ನಿಯಂತ್ರಿಸಲು ಅಮೆರಿಕದ ಆರ್ಥಿಕ ನೀತಿಗಳನ್ನು ಬಿಗಿಗೊಳಿಸುತ್ತಿರುವುದು, ರಷ್ಯಾ-ಉಕ್ರೇನ್‌ ಸಂಘರ್ಷದಿಂದ ತಲೆದೂರಿರುವ ಜಾಗತಿಕ ಸಮಸ್ಯೆಗಳಿಂದಾಗಿ ರೂಪಾಯಿ ಮೌಲ್ಯ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಕುಸಿಯುತ್ತಿರುವ ರೂಪಾಯಿಯನ್ನು ಹೆಚ್ಚಿಸಲು ವಿದೇಶಿ ವಿನಿಮಯ ಸಂಗ್ರಹವನ್ನು ಬಳಸುತ್ತಿರುವ ಕಾರಣ ವಿದೇಶೀ ವಿನಿಮಯ ಸಂಗ್ರಹವು ಕುಸಿಯುತ್ತಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!