ಸತತ ಮೂರನೇ ವಾರವೂ ಏರಿಕೆ ದಾಖಲಿಸಿದ ಭಾರತದ ವಿದೇಶಿ ವಿನಿಮಯ ಸಂಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹೊಸವರ್ಷದ ಮೊದಲ ತಿಂಗಳಿನಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹವು ಏರಿಕೆ ದಾಖಲಿಸಿದ್ದು ಆರು ತಿಂಗಳ ಗರಿಷ್ಟ ಮಟ್ಟವನ್ನು ತಲುಪಿದೆ. ಜನವರಿ 27ರಂದು ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿವಿನಿಮಯ ಸಂಗ್ರಹವು 576.76 ಶತಕೋಟಿ ಡಾಲರ್‌ ಗೆ ತಲುಪಿದ್ದು ಇದು ಸತತ ಮೂರನೇ ವಾರದ ಏರಿಕೆಯಾಗಿದೆ. ಹಿಂದಿನವಾರದಲ್ಲಿ 573.73 ಶತಕೋಟಿ ಡಾಲರ್‌ ವಿದೇಶಿ ವಿನಿಮಯ ಸಂಗ್ರಹವಿತ್ತು.

ವಿದೇಶಿವಿನಿಮಯ ಮಾರುಕಟ್ಟೆಯಲ್ಲಿ ಕಳೆದ ಕೆಲ ತಿಂಗಳುಗಳಿಂದ ಕುಸಿತಕ್ಕೊಳಗಾಗುತ್ತಿದ್ದ ರೂಪಾಯಿ ಮೌಲ್ಯ ತುಸು ಸ್ಥಿರತೆ ಕಂಡ ಹಿನ್ನೆಲೆಯಲ್ಲಿ ಆರ್‌ಬಿಐ ಹೆಚ್ಚಿನ ಪ್ರಮಾಣದಲ್ಲಿ ಡಾಲರ್‌ಗಳನ್ನು ಖರೀದಿಸಿರುವುದು ಈ ಏರಿಕೆಗೆ ಕಾರಣವಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!