ಭಾರತದ ಅಂತರ್ಜಲ ಕುಸಿತದತ್ತ ಸಾಗುತ್ತಿದೆ- ಬೆಚ್ಚಿಬೀಳಿಸುವಂತಿದೆ ವಿಶ್ವಸಂಸ್ಥೆ ವರದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

2025ರ ವೇಳೆಗೆ ಭಾರತದ ಹಲವು ಭಾಗಗಳಲ್ಲಿ ಅಂತರ್ಜಲ ಬಿಕ್ಕಟ್ಟು ಎದುರಾಗಲಿದೆ ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ. ಅಂತರ್ಜಲ ಕುರಿತ ವರದಿಯನ್ನು ವಿಶ್ವಸಂಸ್ಥೆ ಗುರುವಾರ ಬಿಡುಗಡೆ ಮಾಡಿದ್ದು, ಬೆಚ್ಚಿಬೀಳಿಸುವ ಅಂಶಗಳು ಈ ವರದಿಯಲ್ಲಿವೆ.  ವಿಶ್ವಸಂಸ್ಥೆಯ ವಿಶ್ವವಿದ್ಯಾನಿಲಯ – ಇನ್‌ಸ್ಟಿಟ್ಯೂಟ್ ಫಾರ್ ಎನ್ವಿರಾನ್‌ಮೆಂಟ್ ಅಂಡ್ ಹ್ಯೂಮನ್ ಸೆಕ್ಯುರಿಟಿ, ಇಂಟರ್‌ಕನೆಕ್ಟೆಡ್ ಡಿಸಾಸ್ಟರ್ ರಿಸ್ಕ್ ರಿಪೋರ್ಟ್ 2023 ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಿದ ವರದಿಯು ಇಂಡೋ-ಗಂಗಾ ನದಿ ಜಲಾನಯನ ಪ್ರದೇಶದ ಕೆಲವು ಭಾಗಗಳಲ್ಲಿ ಈಗಾಗಲೇ ಅಂತರ್ಜಲ ಕುಸಿದಿದೆ ಎಂಬ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದೆ.

ಅಂತರ್ಜಲ ಕುಸಿತ, ಪರ್ವತ ಹಿಮನದಿಗಳು ಕರಗುವುದು ಮತ್ತು ಅಂತರ್ಜಲವು ಅಸಹನೀಯವಾಗಿ ಬಿಸಿಯಾಗುತ್ತದೆ ಎಂದು ವರದಿ ಹೇಳಿದೆ. ಶೇಕಡಾ 70 ರಷ್ಟು ಅಂತರ್ಜಲವನ್ನು ಕೃಷಿಗೆ ಬಳಸಲಾಗುತ್ತಿದ್ದು, ಇದರಿಂದ ಅಂತರ್ಜಲ ಕಣ್ಮರೆಯಾಗುತ್ತಿದೆ. ವಿಶ್ವಸಂಸ್ಥೆಯ ವರದಿ ಪ್ರಕಾರ, ಬರ ಪರಿಸ್ಥಿತಿಯಿಂದಾಗಿ ಜಲಾಶಯಗಳೂ ಬತ್ತಿ ಹೋಗುತ್ತಿವೆ. ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕಡಿಮೆಯಾಗುತ್ತಿದೆ ಎಂದು ಹೇಳಿದೆ.

ಇದರೊಂದಿಗೆ ಬಾವಿಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ. ಅಂತರ್ಜಲ ಕಡಿಮೆಯಾದರೆ ರೈತರು ನೀರು ಕಳೆದುಕೊಳ್ಳಬಹುದು. ಆಹಾರ ಉತ್ಪಾದನಾ ವ್ಯವಸ್ಥೆಗೆ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ವರದಿ ತೀರ್ಮಾನಿಸಿದೆ. ಸೌದಿ ಅರೇಬಿಯಾದಂತಹ ಅನೇಕ ದೇಶಗಳು ಈಗಾಗಲೇ ಅಂತರ್ಜಲದ ಕೊರತೆಯನ್ನು ಎದುರಿಸುತ್ತಿವೆ. ಭಾರತದಲ್ಲಿ ಪ್ರಸ್ತುತ ಅಂತರ್ಜಲ ಬಳಕೆ ಅಮೆರಿಕ ಮತ್ತು ಚೀನಾಕ್ಕಿಂತ ಹೆಚ್ಚಾಗಿದೆ.

ಭಾರತದ 1.4 ಶತಕೋಟಿ ಜನರು ಬೆಳೆಗಳನ್ನು ಬೆಳೆಯಲು ಅಂತರ್ಜಲ ಸಂಪನ್ಮೂಲಗಳನ್ನು ಅವಲಂಬಿಸಿದ್ದಾರೆ. ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಅಕ್ಕಿ ಮತ್ತು ಗೋಧಿ ಬೆಳೆಗಳನ್ನು ಬೆಳೆಯಲಾಗುತ್ತದೆ. ಪಂಜಾಬ್ ರಾಜ್ಯದಲ್ಲಿ ಶೇ.78 ರಷ್ಟು ರೈತರು ನೀರಾವರಿಗಾಗಿ ಬಾವಿಗಳ ಅಂತರ್ಜಲವನ್ನು ಬಳಸುತ್ತಿದ್ದಾರೆ. ವರದಿ ಪ್ರಕಾರ 2025ರ ವೇಳೆಗೆ ಅಂತರ್ಜಲ ಲಭ್ಯತೆ ಕಡಿಮೆಯಾಗಲಿದೆ. ಅಂತರ್ಜಲ ಕಡಿಮೆಯಾದರೆ ದೊಡ್ಡ ಅಪಾಯ ಎದುರಾಗಲಿದೆ ಎಂದು ವಿಶ್ವ ತಜ್ಞ ಜಾಕ್ ಓ ಕಾನರ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!