Thursday, March 23, 2023

Latest Posts

ಜನವರಿಯಲ್ಲಿ ಏರಿಕೆ ದಾಖಲಿಸಿದೆ ಭಾರತದ ಕೈಗಾರಿಕಾ ಉತ್ಪಾದನಾ ಬೆಳವಣಿಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದ ಕೈಗಾರಿಕಾ ಉತ್ಪಾದನಾ ಬೆಳವಣಿಗೆಯು ಜನವರಿ ತಿಂಗಳಲ್ಲಿ ತುಸು ಏರಿಕೆಯನ್ನು ದಾಖಲಿಸಿದೆ. ಶುಕ್ರವಾರ ಬಿಡುಗಡೆಯಾದ ಅಧಿಕೃತ ಅಂಕಿಅಂಶಗಳ ಪ್ರಕಾರ, ಮುಖ್ಯವಾಗಿ ವಿದ್ಯುತ್, ಗಣಿಗಾರಿಕೆ ಮತ್ತು ಉತ್ಪಾದನಾ ವಲಯಗಳ ಉತ್ತಮ ಕಾರ್ಯಕ್ಷಮತೆಯಿಂದಾಗಿ ಭಾರತದ ಕೈಗಾರಿಕಾ ಉತ್ಪಾದನೆಯ ಬೆಳವಣಿಗೆಯು 2023ರ ಜನವರಿಯಲ್ಲಿ 5.2 ಶೇಕಡಾಕ್ಕೆ ಏರಿಕೆಯಾಗಿದೆ. ಇದು ಡಿಸೆಂಬರ್‌ 2022ರಲ್ಲಿ 4.7 ಶೇಕಡಾದಷ್ಟಿತ್ತು.ವಾರ್ಷಿಕ ಹಾಗೂ ಅನುಕ್ರಮದ ಆಧಾರದ ಮೇಲೆ ಸುಧಾರಣೆ ಕಂಡುಬಂದಿದೆ. ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ (ಐಐಪಿ) ಪ್ರಕಾರ ಕಾರ್ಖಾನೆಯ ಉತ್ಪಾದನೆಯ ಬೆಳವಣಿಗೆಯು ಜನವರಿ 2022 ರಲ್ಲಿ ಎರಡು ಪ್ರತಿಶತದಷ್ಟಿತ್ತು.

ರಾಷ್ಟ್ರೀಯ ಅಂಕಿಅಂಶ ಕಚೇರಿ (NSO) ಬಿಡುಗಡೆ ಮಾಡಿದ IIP ಮಾಹಿತಿಯ ಪ್ರಕಾರ, ಉತ್ಪಾದನಾ ವಲಯವು ಜನವರಿಯಲ್ಲಿ 3.7 ಶೇಕಡಾದಷ್ಟು ಬೆಳವಣಿಗೆ ದಾಖಲಿಸಿದ್ದು ಇದು ಕಳೆದ ವರ್ಷದ ಇದೇ ಅವಧಿಯಲ್ಲಿ 1.9 ಶೇಕಡಾದಷ್ಟಿತ್ತು. ಗಣಿಗಾರಿಕೆಯ ಉತ್ಪಾದನೆಯು ಕಳೆದ ವರ್ಷದ ಜನವರಿಯಲ್ಲಿ 3 ಶೇಕಡಾದಷ್ಟಿತ್ತು ಇದು ಈ ವರ್ಷದ ಜನವರಿಯಲ್ಲಿ 8.8 ಶೇಕಡಾ ಏರಿಕೆಯಾಗಿದೆ. 2023 ರ ಜನವರಿಯಲ್ಲಿ ವಿದ್ಯುತ್ ಉತ್ಪಾದನೆಯೂ ಕೂಡ ಶೇಕಡಾ 12.7 ರಷ್ಟು ಏರಿಕೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!