ಭಾರತದ ಅತಿದೊಡ್ಡ ತೇಲುವ ಸೌರವಿದ್ಯುತ್‌ ಘಟಕ : ದೇಶದ ಶಕ್ತಿಕೊರತೆ ನೀಗಿಸಲು ಟಾಟಾದ ಹೊಸ ಕಾಯಕಲ್ಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ದೇಶದ ಪ್ರತಿಷ್ಟಿತ ಟಾಟಾಗ್ರುಪ್‌ ನಿಂದ ಮತ್ತೊಂದು ಮಾದರಿ ಕಾರ್ಯವಾಗಿದೆ. ಟಾಟಾ ಪವರ್‌ ಸ್ವಾಮ್ಯದ ಟಾಟಾ ಪವರ್ ಸೋಲಾರ್ ವತಿಯಿಂದ ಕೇರಳದಲ್ಲಿ ದೇಶದಲ್ಲೇ ಅತಿದೊಡ್ಡ ತೇಲುವ ಸೌರ ವಿದ್ಯುತ್‌ ಘಟಕವನ್ನು ನಿರ್ಮಾಣಮಾಡಿದೆ. 350 ಎಕರೆಯಷ್ಟು ವಿಶಾಲವಾಗಿ ಹರಡಿರುವ ಸೋಲಾರ್‌ ವಿದ್ಯುತ್‌ ಉತ್ಪಾದನಾ ಯುನಿಟ್‌ ಅನ್ನು ಕೇರಳದ ಕಾಯಕುಲಂನಲ್ಲಿ ಟಾಟಾ ನಿಯೋಜನೆಗೊಳಿಸಿದೆ.

ಅವಧಿಗೆ ಮುಂಚೆಯೇ ಪೂರ್ಣಗೊಂಡಿರುವ ಖ್ಯಾತಿಗೆ ಪಾತ್ರವಾಗಿರುವ ಈ ಯೋಜನೆಯು 101.6 ಮೆಗಾವ್ಯಾಟ್ ಸಾಮರ್ಥ್ಯವನ್ನು ಹೊಂದಿದೆ. ವಿಶೇಷವೇನೆಂದರೆ ಇವು 350 ಎಕರೆ ಹಿನ್ನೀರಿನ ಜಲಮೂಲ ಪ್ರದೇಶದಲ್ಲಿ ನಿರ್ಮಾಣಗೊಂಡಿವೆ. ಈ ಸೋಲಾರ್‌ ಪ್ಲ್ಯಾಂಟ್‌ ನಿರ್ಮಿಸುವಾಗ ಸಮುದ್ರದ ಉಪ್ಪುನೀರಿನ ಲಣಾಂಶದಿಂದ ನಿರ್ಮಾಣದ ಕಾರ್ಯದಲ್ಲಿ ಅನೇಕ ತೊಡಕುಂಟಾಯಿತಾದರೂ ನಿಗದಿತ ಸಮಯಕ್ಕಿಂತ ಮೊದಲೇ ಈ ಯೋಜನೆಯನ್ನು ಪೂರ್ಣಗೊಳಿಸಿರುವುದಾಗಿ ಟಾಟಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

“ಭಾರತದ ಮೊದಲ ಮತ್ತು ಅತಿ ದೊಡ್ಡ ತೇಲುವ ಸೌರ ಯೋಜನೆಯ ಕಾರ್ಯಾರಂಭವು ಭಾರತದ ಸುಸ್ಥಿರ ಇಂಧನ ಗುರಿಗಳನ್ನು ಪೂರೈಸುವ ನಿಟ್ಟಿನಲ್ಲಿ ಒಂದು ನವೀನ ಮತ್ತು ಹೆಜ್ಜೆಯಾಗಿದೆ. ದೊಡ್ಡ ಜಲಮೂಲದ ಮೇಲೆ ತೇಲುತ್ತಿರುವ ಈ ಸೌರ ಯೋಜನೆಯನ್ನು ತಲುಪಿಸುವಲ್ಲಿ ನಮ್ಮ ತಂಡದ ಅವಿರತ ಪ್ರಯತ್ನಗಳ ಬಗ್ಗೆ ನಾವು ಹೆಮ್ಮೆಪಡುತ್ತೇವೆ” ಟಾಟಾ ಪವರ್‌ ನ ಸಿಇಓ ಮತ್ತು ಎಂಡಿ ಪ್ರವೀರ್ ಸಿನ್ಹಾ ಹೇಳುತ್ತಾರೆ.

ಸ್ಕ್ಯಾಫೋಲ್ಡಿಂಗ್ ಪ್ಯಾನಲ್‌ಗಳನ್ನು ಬಳಸಿ ನೀರಿನ ಮೇಲೆ ತೇಲುವಂತೆ ಈ ಘಟಕವನ್ನು ನಿರ್ಮಿಸಲಾಗಿದೆ. ಇದು ಸೌರ ದ್ಯುತಿವಿದ್ಯುಜ್ಜನಕ (FSPV) ವರ್ಗದಲ್ಲಿ ಮೊದಲನೆಯ ಹಾಗೂ ಅತಿವೇಗವಾಗಿ ನಿರ್ಮಾಣವಾದ ಹೆಗ್ಗಳಿಕೆ ಗಳಿಸಿದೆ. ಈ ಸ್ಥಾವರವು 5 ಮೆಗಾವ್ಯಾಟ್ (MW) ಸಾಮರ್ಥ್ಯವನ್ನು ಹೊಂದಿರುವ ಫ್ಲೋಟಿಂಗ್ ಇನ್ವರ್ಟರ್ ಪ್ಲಾಟ್‌ಫಾರ್ಮ್ ಅನ್ನು ಹೊಂದಿದ್ದು ಒಟ್ಟಾರೆ 101.6 MWp ಸಾಮರ್ಥ್ಯ ಹೊಂದಿದೆ. ನೀರಿನಾಳದಲ್ಲಿ 20 ಮೀಟರ್‌ ಆಳ ಕೊರೆದು ಎರಕಹೊಯ್ದ ಪೈಲ್‌ ಫೌಂಡೇಷನ್‌ಗಳನ್ನು ನಿರ್ಮಿಸಲಾಗಿದೆ. ನೀರಿನಲಿರುವ ಹೂಳೆತ್ತಿ ಭದ್ರವಾದ ಅಡಿಪಾಯ ಹಾಕಿ ಇವುಗಳನ್ನು ನಿರ್ಮಿಸಲಾಗಿದ್ದು ಕೇಂದ್ರ ಮಾನಿಟರಿಂಗ್ ಮತ್ತು ಕಂಟ್ರೋಲ್ ಸ್ಟೇಷನ್ಸ್ (CMCS) ಹೊಂದಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!