ಭಾರತದ ಉತ್ಪಾದನಾ ಸೂಚ್ಯಂಕದಲ್ಲಿ ಏರಿಕೆ: ಮೂರು ತಿಂಗಳ ಗರಿಷ್ಟಮಟ್ಟ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

2023ರ ಮಾರ್ಚ್‌ ತಿಂಗಳಲ್ಲಿ ಭಾರತದ ಉತ್ಪಾದನಾ ಕ್ಷೇತ್ರವು ಹೆಚ್ಚಿನ ಪ್ರಮಾಣದಲ್ಲಿ ವಿಸ್ತರಿಸಿದ್ದು ಭಾರತದ ಉತ್ಪಾದನಾ ಸೂಚ್ಯಂಕವು ಮೂರುತಿಂಗಳಲ್ಲಿಯೇ ಅತ್ಯಂತ ಗರಿಷ್ಟ ಪ್ರಮಾಣವನ್ನು ತಲುಪಿದೆ ಎಂಬುದನ್ನು ಖಾಸಗಿ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. S&P ಗ್ಲೋಬಲ್ ಪರ್ಚೇಸಿಂಗ್ ಮ್ಯಾನೇಜರ್‌ ಸೂಚ್ಯಂಕವು (PMI) 56.4 ಮಟ್ಟಕ್ಕೆ ತಲುಪಿದೆ ಎಂದು ಏಪ್ರಿಲ್‌ 3ರಂದು ಬಿಡುಗಡೆ ಮಾಡಲಾದ ಅಂಕಿ ಅಂಶಗಳು ತೋರಿಸಿವೆ.

ಎಸ್ & ಪಿ ಗ್ಲೋಬಲ್ ಸಂಕಲಿಸಿದ ಭಾರತದ ಉತ್ಪಾದನಾ ಖರೀದಿ ಮ್ಯಾನೇಜರ್ ಸೂಚ್ಯಂಕವು(PMI) ಫೆಬ್ರವರಿಯ 55.3 ರಿಂದ ಮಾರ್ಚ್‌ನಲ್ಲಿ 56.4 ಕ್ಕೆ ಏರಿತು, ಇದು 21 ನೇ ನೇರ ತಿಂಗಳ ಬೆಳವಣಿಗೆಯಾಗಿದೆ. 50 ಅಂಕಗಳಿಗಿಂತ ಮೇಲಿನ ಬೆಳವಣಿಗೆಯು ಮಾರುಕಟ್ಟೆ ವಿಸ್ತರಣೆಯನ್ನು ಸೂಚಿಸುತ್ತದೆ.

ವರದಿಯ ಪ್ರಕಾರ ಭಾರತೀಯ ಕಾರ್ಖಾನೆಗಳು ಮಾರ್ಚ್‌ ತಿಂಗಲಿನಲ್ಲಿ ಅತಿ ಹೆಚ್ಚು ಬೇಡಿಕೆಗಳನ್ನುಸ್ವೀಕರಿಸಿದ್ದು ಉತ್ಪಾದನೆಯಲ್ಲಿ ಬೆಳವಣಿಗೆಯಾಗಿರುವುದು ಈ ಏರಿಕೆಗೆ ಕಾರಣವಾಗಿದೆ. “ಕಾರ್ಖಾನೆಯ ಆರ್ಡರ್‌ಗಳ ಬೆಳವಣಿಗೆಯ ಪರಿಣಾಮವಾಗಿ ಉತ್ಪಾದನೆಯು ಮೂರು ತಿಂಗಳಲ್ಲಿ ಪ್ರಬಲವಾಗಿದೆ. ಹೀಗಾಗಿ ಆರ್ಥಿಕ ವರ್ಷದ ಅಂತಿಮ ತ್ರೈಮಾಸಿಕದಲ್ಲಿ ಭಾರತದ ಉತ್ಪಾದನಾ ವಲಯವು ಗಮನಾರ್ಹ ಕಾರ್ಯಕ್ಷಮತೆಯನ್ನು ದಾಖಲಿಸಿದೆ” ಎಂದು ಎಸ್ & ಪಿ ಗ್ಲೋಬಲ್ ಹೇಳಿಕೆಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!