ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಹಮದಾಬಾದ್-ಮುಂಬೈ ಬುಲೆಟ್ ರೈಲು ಯೋಜನೆಯ 360 ಕಿ.ಮೀ. ಹಾಗೂ ಸಮುದ್ರದೊಳಗಿನ ಸುರಂಗದ ಸುಮಾರು 2 ಕಿ.ಮೀ. ಮಾರ್ಗ ಪೂರ್ಣಗೊಂಡಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಒಟ್ಟು 508 ಕಿ.ಮೀ. ಬುಲೆಟ್ ರೈಲು ಮಾರ್ಗ ಇದಾಗಲಿದ್ದು, ಗಂಟೆಗೆ ಸರಾಸರಿ 170 ಕಿ.ಮೀ. ವೇಗದಲ್ಲಿ ರೈಲು ಸಂಚರಿಸಲಿದೆ. ಇದು 3 ತಾಸಿನ ಪ್ರಯಾಣವಾಗಿರಲಿದ್ದು, ಪ್ರಮುಖ ವಾಣಿಜ್ಯ ನಗರಗಳಾದ ಮುಂಬೈ, ಸೂರತ್, ವಡೋದರಾ, ಅಹಮದಾಬಾದ್ ನಡುವೆ ಸಂಪರ್ಕ ಕಲ್ಪಿಸಲಿದೆ. 1.08 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿಗಳು ನಡೆಯುತ್ತಿದೆ ಎಂದರು.
ಬುಲೆಟ್ ರೈಲು ಮಾರ್ಗವಾಗಿರುವ ಮುಂಬೈ-ಅಹಮದಾಬಾದ್ ಕಾರಿಡಾರ್ ವಿದ್ಯುತೀಕರಣಕ್ಕಾಗಿ ಉಕ್ಕಿನ ಸ್ತಂಭಗಳನ್ನು ನಿರ್ಮಿಸಲಾಗಿದ್ದು, ಇವುಗಳನ್ನು ಮೇಕ್ ಇನ್ ಇಂಡಿಯಾ ನೀತಿಯಡಿ ಜಪಾನಿನ ಮಾದರಿಯಲ್ಲಿ ಭಾರತದಲ್ಲಿಯೇ ತಯಾರಿಸಲಾಗಿದೆ ಎಂದರು.