ಶಾಲೆಯಲ್ಲಿ ಮಕ್ಕಳಿಗೆ ಎಸಿ ವ್ಯವಸ್ಥೆಗೆ ಪೋಷಕರೇ ವೆಚ್ಚ ಭರಿಸಬೇಕು: ಹೈಕೋರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಶಾಲೆಯಲ್ಲಿ ಮಕ್ಕಳಿಗೆ ಹವಾ ನಿಯಂತ್ರಣ (Air Conditioner) ವ್ಯವಸ್ಥೆ ಕಲ್ಪಿಸಲು ತಗಲುವ ವೆಚ್ಚವನ್ನು ಪೋಷಕರೇ ಭರಿಸಬೇಕು ಎಂದು ದೆಹಲಿ ಹೈಕೋರ್ಟ್ (Delhi High Court) ಹೇಳಿದೆ.

ತರಗತಿಗಳಲ್ಲಿ ಹವಾನಿಯಂತ್ರಣ ವ್ಯವಸ್ಥೆ ನೀಡಲು ಶುಲ್ಕ ವಿಧಿಸುವ ಖಾಸಗಿ ಶಾಲೆಯ ಹಕ್ಕನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದೆ.

ಇಲ್ಲಿನ ಮಹಾರಾಜ ಅಗ್ರಸೈನ್ ಪಬ್ಲಿಕ್ ಸ್ಕೂಲ್ ಎಸಿಗಾಗಿ ಪ್ರತಿ ವಿದ್ಯಾರ್ಥಿಗೆ 2,000 ಮಾಸಿಕ ಶುಲ್ಕ ವಿಧಿಸುತ್ತಿದೆ. ಇದು ಅಸಮಂಜಸವಾಗಿದೆ ಎಂದು ಅರ್ಜಿದಾರರಾದ ಮನೀಶ್ ಗೋಯೆಲ್ ಅರ್ಜಿ ಸಲ್ಲಿಸಿದ್ದರು. ಶಿಕ್ಷಣ ನಿರ್ದೇಶನಾಲಯ (ಡಿಒಇ) ಮಧ್ಯಪ್ರವೇಶಿಸಿ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಮನವಿ ಮಾಡಿದ್ದರು.

ತರಗತಿಗಳಲ್ಲಿ ಹವಾನಿಯಂತ್ರಣ ಸೌಲಭ್ಯಗಳನ್ನು ಒದಗಿಸುವ ಜವಾಬ್ದಾರಿಯು ಶಾಲೆಯ ಆಡಳಿತದ ಮೇಲಿದೆ. ಶಾಲೆಯ ಸ್ವಂತ ಹಣ ಮತ್ತು ಸಂಪನ್ಮೂಲಗಳನ್ನು ಬಳಸಬೇಕು. ವಿದ್ಯಾರ್ಥಿಗಳ ಮೇಲೆ ಈ ಶುಲ್ಕವನ್ನು ವಿಧಿಸುವುದು ದೆಹಲಿ ಶಾಲಾ ಶಿಕ್ಷಣ ನಿಯಮಗಳು, 1973ರ ನಿಯಮ 154ಗೆ ವಿರುದ್ಧವಾಗಿದೆ ಎಂದು ಮನೀಶ್ ಗೋಯೆಲ್ ವಾದಿಸಿದರು.

ಈ ವಾದವನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ನೇತೃತ್ವದ ದ್ವಿಸದಸ್ಯ ಪೀಠ ಒಪ್ಪಲಿಲ್ಲ. ಶಾಲೆಗಳು ವಿಧಿಸುವ ಇತರ ಶುಲ್ಕಗಳಿಗೆ ಎಸಿ ಶುಲ್ಕವನ್ನು ಹೋಲಿಸಿದ ಪೀಠ, ಹವಾನಿಯಂತ್ರಣ ಸೌಲಭ್ಯವು ಶಾಲೆಗಳು ವಿಧಿಸುವ ಲ್ಯಾಬ್ ಮತ್ತು ಸ್ಮಾರ್ಟ್‌ಕ್ಲಾಸ್ ಶುಲ್ಕದಂತಹ ಇತರ ಶುಲ್ಕಗಳಿಗಿಗೆ ಸಮ. ಇಂತಹ ಸೌಲಭ್ಯಗಳನ್ನು ಒದಗಿಸುವ ಆರ್ಥಿಕ ಹೊರೆಯನ್ನು ಶಾಲಾ ಆಡಳಿತದ ಮೇಲೆ ಮಾತ್ರ ಹಾಕಲಾಗುವುದಿಲ್ಲ ಎಂದು ಹೇಳಿತು.

ಪೋಷಕರು ಶಾಲೆಯನ್ನು ಆಯ್ಕೆ ಮಾಡುವಾಗ ತಮ್ಮ ಮಕ್ಕಳಿಗೆ ಒದಗಿಸುವ ಸೌಲಭ್ಯಗಳು ಮತ್ತು ಸೌಲಭ್ಯಗಳ ವೆಚ್ಚದ ಬಗ್ಗೆ ಗಮನ ಹರಿಸಬೇಕು ಎಂದು ಪೀಠ ಹೇಳಿತು. .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!