ಹೊಸದಿಗಂತ ಡಿಜಿಟಲ್ ಡೆಸ್ಕ್:
2022-23ರ ಏಪ್ರಿಲ್-ಅಕ್ಟೋಬರ್‌ನಲ್ಲಿ 2013-14ರ ಅದೇ ಅವಧಿಗೆ ಹೋಲಿಸಿದರೆ ಭಾರತದ ಫಾರ್ಮಾ ರಫ್ತುಗಳು 138% ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸಖ್ ಮಾಂಡವೀಯ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು 2103-14ರ ಏಪ್ರಿಲ್ ಅಕ್ಟೋಬರ್ ಅವಧಿಗೆ ಹೋಲಿಸಿದರೆ 2022-23ರಲ್ಲಿ ರಫ್ತುಗಳು 138 ಶೇಕಡಾ ಹೆಚ್ಚಾಗಿದೆ. 2013-14 ರಲ್ಲಿ 37,987.68 ಕೋಟಿಗಳಷ್ಟಿದ್ದ ರಪತು 2021-22 ರಲ್ಲಿ 90,324.23 ಕೋಟಿಗಳಿಗೆ ತಲುಪಿದೆ ಎಂಬ ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ. “ಭಾರತವು ಔಷಧಿ ರಫ್ತುಗಳು ವಿಶ್ವವನ್ನು ಮುನ್ನಡೆಸುತ್ತಿವೆ. ಭಾರತವು ಜಗತ್ತಿನ ಚೇತರಿಕೆಗೆ ಸಹಾಯ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯಿಂದ ಭಾರತವು ಜಗತ್ತಿನ ಫಾರ್ಮಾಹೌಸ್ ಆಗಿ ಹೊರಹೊಮ್ಮಿದೆ” ಎಂದು ಅವರು ಉಲ್ಲೇಖಿಸಿದ್ದಾರೆ.
2020-21 ರಲ್ಲಿನ ಅತ್ಯುತ್ತಮ ಕಾರ್ಯಕ್ಷಮತೆಯ ಹೊರತಾಗಿಯೂ, ಭಾರತೀಯ ಫಾರ್ಮಾ ರಫ್ತುಗಳು 2021-22 ರಲ್ಲಿ ಮತ್ತೊಮ್ಮೆ ಆರೋಗ್ಯಕರ ಕಾರ್ಯಕ್ಷಮತೆಯನ್ನು ದಾಖಲಿಸಿವೆ. ಜಾಗತಿಕ ವ್ಯಾಪಾರದ ಅಡೆತಡೆಗಳು ಮತ್ತು COVID-ಸಂಬಂಧಿತ ಔಷಧಿಗಳ ಬೇಡಿಕೆಯ ಕುಸಿತದ ಹೊರತಾಗಿಯೂ 2021-22 ರಲ್ಲಿ ಫಾರ್ಮಾ ರಫ್ತು ಧನಾತ್ಮಕ ಬೆಳವಣಿಗೆಯನ್ನು ಉಳಿಸಿಕೊಂಡಿದೆ.