ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೆಪ್ಟೆಂಬರ್ 25 ರಿಂದ 30 ರವರೆಗೆ ರಜಪೂತಾನ ರೈಫಲ್ಸ್ ಬೆಟಾಲಿಯನ್‌ನ (Rajputana Rifles Battalion) 32 ಸಿಬ್ಬಂದಿಯನ್ನು ಒಳಗೊಂಡ ಭಾರತೀಯ ಸೇನಾ ತುಕಡಿಯು ರಷ್ಯಾದಲ್ಲಿ ನಡೆಯಲಿರುವ ಭಯೋತ್ಪಾದನಾ ನಿಗ್ರಹ ತರಬೇತಿಯಲ್ಲಿ ಭಾಗವಹಿಸಲಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ರಷ್ಯಾ EWG ನಡೆಯುವ ಈ ಕಾರ್ಯಕ್ರಮದಲ್ಲಿ ಬಹುರಾಷ್ಟ್ರೀಯ ಜಂಟಿ ಮಿಲಿಟರಿ ಸಮರಾಭ್ಯಾಸವನ್ನು ಏಷ್ಯಾನ್ ರಕ್ಷಣಾ ಮಂತ್ರಿಗಳ ಸಭೆಯ ಜೊತೆಗೆ ನಡೆಸಲಾಗುವುದು. ಇದರಲ್ಲಿ ಭಯೋತ್ಪಾದನೆ ನಿಗ್ರಹದ ಕುರಿತಾದ ತಜ್ಞರ ಸಲಹೆ ಮತ್ತು ತರಬೇತಿಯನ್ನು ನೀಡಲಾಗುವುದು.
2017 ರಿಂದ, ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ (ASEAN) ಮತ್ತು ಇತರ ದೇಶಗಳ ನಡುವೆ ಸಂವಾದ ಮತ್ತು ಸಹಾಕಾರವನ್ನು ಗಟ್ಟಿಗೊಳಿಸುವ ಸಲುವಾಗಿ ಈ ಕಾರ್ಯಕ್ರವವನ್ನು ಮಾಡಲಾಗುತ್ತದೆ. ಈ ಸಮರ ಅಭ್ಯಾಸವು ದೇಶಗಳ ಗಡಿ ಭಾಗಗಳ ಸುರಕ್ಷತೆ ಮತ್ತು ಭಯೋತ್ಪಾದಕ ಗುಂಪುಗಳನ್ನು ನಾಶಪಡಿಸುವ ತಂತ್ರಗಳು ಈ ತರಬೇತಿಯಲ್ಲಿ ಇರುತ್ತದೆ.