ಭಾರತ-ಚೀನಾ ನಡುವಿನ ಸಂಬಂಧ ಕಠಿಣವಾಗಿದೆ: ಸಚಿವ ಜೈಶಂಕರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಚೀನಾ ಗಡಿ ಒಪ್ಪಂದವನ್ನು ಉಲ್ಲಂಘಿಸಿದ ನಂತರ ಭಾರತ ಹಾಗೂ ಚೀನಾ ನಡುವಿನ ಸಂಬಂಧ ಕಠಿಣವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.ಜೈಶಕಂಕರ್‌ ತಿಳಿಸಿದ್ದಾರೆ.
ಮ್ಯಚುರಿಟಿ ಸೆಕ್ಯುರಿಟಿ ಕಾನ್ಫರೆನ್ಸ್‌ ನಲ್ಲಿ ಮಾತನಾಡಿದ ಅವರು, ಕಳೆದ 45 ವರ್ಷಗಳ ಕಾಲ ಚೀನಾ ಹಾಗೂ ಭಾರತದ ಗಡಿಗಳಲ್ಲಿ ಶಾಂತಿ ನೆಲೆಸಿತ್ತು. ಆಗ ಯಾವುದೇ ಘರ್ಷಣೆ, ಸಾವು-ನೋವು ಸಂಭವಿಸಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಚೀನಾ ಗಡಿ ಒಪ್ಪಂದ ಉಲ್ಲಂಘಿಸಿದೆ. ಈಗಿರುವ ಗಡಿ ಸಮಸ್ಯೆ ಗಮನಿಸಿದರೆ ಚೀನಾದೊಂದಿಗಿನ ನಮ್ಮ ಸಂಬಂಧ ಹೇಗಿದೆ ಎಂದು ತಿಳಿಸುತ್ತದೆ ಎಂದರು.
2020ರಲ್ಲಿ ನಡೆದ ಗಾಲ್ವನ್‌ ಸಂಘರ್ಷದ ನಂತರ ಚೀನಾದೊಂದಿಗೆ ಭಾರತದ ಸಂಬಂಧ ಮತ್ತಷ್ಟು ಕ್ಷೀಣಿಸಿದೆ. ಇಂದಿನ ಕಾಲದಲ್ಲಿ ಜಗತ್ತು ಪರಸ್ಪರ ಅವಲಂಬಿತವಾಗಿದೆ. ಒಂದು ರಾಷ್ಟ್ರ ತನ್ನ ಹಿತಾಸಕ್ತಿಯನ್ನು ಬದಿಗಿಟ್ಟು ಮತ್ತೊಂದು ರಾಷ್ಟ್ರದೊಂದಿಗೆ ವ್ಯಾಪಾರ ಮಾಡುವುದು ಈಗ ಅನಿವಾರ್ಯವಾಗಿದೆ ಎಂದರು.
ಈಗ ಭಾರತದ ಸಾಮರ್ಥ್ಯ ಹಾಗೂ ಪ್ರಭಾವ ಹಲವು ವರ್ಷಗಳಲ್ಲಿ ಬೆಳೆದಿದೆ ಎಂದರು.
ಜೈಶಂಕರ್ ಅವರು ಜರ್ಮನಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಯುರೋಪ್, ಏಷ್ಯಾ ಮತ್ತು ವಿಶ್ವದ ಇತರ ಭಾಗಗಳ ಮಂತ್ರಿಗಳೊಂದಿಗೆ ಸರಣಿ ಸಭೆ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!