ಡಾಲರ್ ಕೊರತೆಯ ದೇಶಗಳನ್ನೆಲ್ಲಾ ವ್ಯಾಪಿಸಿಕೊಳ್ತಿದೆ ಭಾರತದ ರೂಪಾಯಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದ್ವೀಪ ರಾಷ್ಟ್ರ ಶ್ರೀಲಂಕಾ ಭಾರತೀಯ ರೂಪಾಯಿಯನ್ನು ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಬಳಸಿಕೊಳ್ಳಲು ಒಪ್ಪಿಗೆ ಸೂಚಿಸಿದೆ. ಈಗಾಗಲೇ ಭಾರತ ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಡಾಲರ್ ಬದಲಿಗೆ ರೂಪಾಯಿಗಳನ್ನು ಬಳಸಲು ಮುಂದಾಗುವ ರಾಷ್ಟ್ರಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ.

ಶ್ರೀಲಂಕಾದಂತೆ ಇನ್ನಿತರ ಕೆಲ ದೇಶಗಳು ಭಾರತೀಯ ರೂಪಾಯಿಯನ್ನು ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಬಳಸುವ ಸಾಧ್ಯತೆಗಳು ಹೆಚ್ಚಿದೆ. ಭಾರತೀಯ ರೂಪಾಯಿ ವ್ಯಾಪಾರ  ಕಾರ್ಯವಿಧಾನಕ್ಕೆ ಡಾಲರ್ ಕೊರತೆ ಇರುವ ದೇಶಗಳನ್ನು ತರಲು ಮಾರ್ಗಗಳನ್ನು ಹುಡುಕುತ್ತಿದ್ದೇವೆ ಎಂದು ಭಾರತ ಹೇಳಿಕೊಂಡ ಕೆಲ ದಿನದ ನಂತರ ಶ್ರೀಲಂಕಾ ಭಾರತೀಯ ರೂಪಾಯಿಯನ್ನು ಒಪ್ಪಿಕೊಂಡಿದೆ.

ಶ್ರೀಲಂಕಾದಲ್ಲಿ ಬಾರತೀಯ ರೂಪಾಯಿ ಕರೆನ್ಸಿಯನ್ನು ವಿದೇಶಿ ಕರೆನ್ಸಿ ಎಂದು ಗುರುತಿಸಲು ಒಪ್ಪಿಗೆ ನೀಡುವಂತೆ ಸೆಂಟ್ರಲ್ ಬ್ಯಾಂಕ್ ಆಫ್ ಶ್ರೀಲಂಕಾ, ಭಾರತೀಯ ರಿಸರ್ವ ಬ್ಯಾಂಕ್‌ಗೆ ಮನವಿ ಮಾಡಿದೆ. ಇದಕ್ಕಾಗಿ ಶ್ರೀಲಂಕಾ ವೋಸ್ಟ್ರೋ ಎಂಬ ಸ್ಪೆಷಲ್ ರೂಪಿ ಟ್ರೇಡಿಂಗ್ ಖಾತೆಯನ್ನು ಆರಂಭಿಸಿದೆ.

ಶ್ರೀಲಂಕಾ ತನ್ನ ವಿದೇಶಿ ವ್ಯಾಪಾರಕ್ಕೆ ಭಾರತೀಯ ರೂಪಾಯಿಗಳನ್ನು ಬಳಸಲು ಆರಂಭಿಸಿದ ನಂತರ ಡಾಲರ್ ಬದಲು ರೂಪಾಯಿಯನ್ನೇ ಶ್ರೀಲಂಕನ್ನರು ಬಳಸಬಹುದಾಗಿದೆ. ಇದರಲ್ಲಿ ಶ್ರೀಲಂಕಾಗೆ ಹೆಚ್ಚಿನ ಲಾಭ ಇದೆ, ಡಾಲರ್ ಮೌಲ್ಯ ಹೆಚ್ಚಿರುವುದಕ್ಕೆ ಶ್ರೀಲಂಕಕ್ಕೆ ಅಗತ್ಯವಿರುವ ಹಣದ ಹರಿವಿಗೆ ಭಾರತೀಯ ಕರೆನ್ಸಿ ನೆರವು ನೀಡುತ್ತದೆ.

ಒಂದು ವರ್ಷದಿಂದ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾಗೆ ಇದು ಮುಖ್ಯವಾಗಿದೆ. ವಾಸ್ಟ್ರೋ ಖಾತೆ ತೆರೆಯುವುದರಿಂದ ಶ್ರೀಲಂಕಾದ ಜನರು ಯುಎಸ್ 10,000ನ್ನು ಭೌತಿಕ ರೂಪದಲ್ಲಿ ಇಟ್ಟುಕೊಳ್ಳಬಹುದಾಗಿದೆ. ಲಂಕಾ ಹಾಗೂ ಭಾರತದ ನಡುವಿನ ಅಂತಾರಾಷ್ಟ್ರೀಯ ವಹಿವಾಟುಗಳಿಗೆ ಯುಎಸ್ ಡಾಲರ್ ಬದಲು ಭಾರತೀಯ ರೂಪಾಯಿಗಳನ್ನು ಬಳಸಬಹುದಾಗಿದೆ.

ರಷ್ಯಾದ ಜತೆಗೆ ರೂಪಾಯಿಯಲ್ಲಿ ವ್ಯವಹರಿಸಲು ಭಾರತ ಈಗಾಗಲೇ 12 ವೋಸ್ಟ್ರೋ ಖಾತೆಗಳ ಆರಂಭಕ್ಕೆ ಅನುಮತಿ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!