ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಕ್ರಿಕೆಟ್ ತಂಡದ ದಿಗ್ಗಜ ಹಾಗೂ ಮಾಜಿ ನಾಯಕ ದತ್ತಾಜಿರಾವ್ ಗಾಯಕ್ವಾಡ್ (95) ವಿಧಿವಶರಾಗಿದ್ದಾರೆ.
ದತ್ತಾಜಿರಾವ್ ಅವರು ಭಾರತೀಯ ರಾಷ್ಟ್ರೀಯ ತಂಡದ ಮಾಜಿ ಮುಖ್ಯ ಕೋಚ್ ಔನ್ಶುಮಾನ್ ಗಾಯಕ್ವಾಡ್ ಅವರ ತಂದೆ. ಕಳೆದ 12 ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಬರೋಡಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಮುಂಜಾನೆ ಅವರು ನಿಧನರಾಗಿದ್ದಾರೆ.
ದತ್ತಾಜಿರಾವ್ ಗಾಯಕ್ವಾಡ್ ಅವರು 1952 ಮತ್ತು 1961 ರ ನಡುವೆ ಭಾರತಕ್ಕಾಗಿ ಹನ್ನೊಂದು ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಅವರು 1959 ರ ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಭಾರತ ತಂಡದ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದರು.