ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೋಪಾಲ್‌ನಲ್ಲಿ ಸ್ವಂತ ಮಕ್ಕಳನ್ನೇ ಭಿಕ್ಷಾಟನೆಗೆ ಒತ್ತಾಯ ಮಾಡಿದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಇಂದೋರ್‌ನ ಇಂದಿರಾಬಾಯಿ ತನ್ನ ಐದು ಮಕ್ಕಳಿಗೆ ಭಿಕ್ಷಾಟನೆ ಮಾಡುವಂತೆ ಒತ್ತಾಯ ಮಾಡುತ್ತಿದ್ದರು ಎನ್ನಲಾಗಿದೆ. ಮೂವರು ಮಕ್ಕಳ ಜೊತೆ ಇಂದಿರಾಬಾಯಿ ಸಿಕ್ಕಿಬಿದ್ದಿದ್ದು, ವಿಚಾರಣೆ ವೇಳೆ ಇಂದಿರಾಬಾಯಿ ಸಂಪಾದನೆ ಬಗ್ಗೆ ಕೇಳಿ ಅಧಿಕಾರಿಗಳೇ ದಂಗಾಗಿದ್ದಾರೆ.
ಭಿಕ್ಷೆ ಬೇಡಿ ಇಡೀ ಕುಟುಂಬ ನಿರ್ವಹಣೆ ಜೊತೆಗೆ ಕೋಟಾದಲ್ಲಿ ಎರಡು ಅಂತಸ್ತಿನ ಮನೆಯಲ್ಲಿ ಇಂದಿರಾ ಕಟ್ಸಿದ್ದಾರೆ. ಜೊತೆಗೆ ವ್ಯವಸಾಯಕ್ಕೆ ಜಮೀನು, ಗಂಡನಿಗೆ ಮೊಬೈಲ್ ಹಾಗೂ ಬೈಕ್ ಕೊಡಿಸಿದ್ದಾರೆ. ಇನ್ನು ತಾನೂ ಸ್ಮಾರ್ಟ್ ಫೋನ್ ಇಟ್ಟುಕೊಂಡಿದ್ದ ಒಂದೂವರೆ ತಿಂಗಳಿಗೆ ಎರಡೂ ವರೆ ಲಕ್ಷ ದುಡಿಯುವುದಾಗಿ ಹೇಳಿದ್ದಾರೆ.
ಕೆಲಸ ಮಾಡುವ ಬದಲು ಭಿಕ್ಷೆ ಬೇಡಿದ್ಯಾಕೆ ಎಂದು ಪೊಲೀಸರು ಪ್ರಶ್ನಿಸಿದ್ದು, ನಾನು ಕಳ್ಳತನ ಮಾಡಿಲ್ಲ, ಯಾರೂ ಕೆಲಸ ಕೊಡೋದಿಲ್ಲ, ಹಸಿವು ಸರ್ ಅದ್ಕೆ ಭಿಕ್ಷೆ ಬೇಡ್ತೀನಿ ಎಂದಿದ್ದಾರೆ. ಒಟ್ಟಾರೆ ಇಂದಿರಾಬಾಯಿ ವಾರ್ಷಿಕ ಟರ್ನ್‌ಓವರ್ 2೦ ಕೋಟಿ ರೂಪಾಯಿ ಎಂದು ಹೇಳಿಕೊಂಡಿದ್ದಾರೆ.