ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಒಂದು ವಾರದಿಂದ ಹತ್ತು ಸಾವಿರ ಗಡಿ ದಾಟುತ್ತಿದ್ದ ಕೊರೊನಾ ಪ್ರಕರಣಗಳು ಗಣನೀಯವಾಗಿ ಇಳಿಕೆ ಕಂಡಿದೆ. ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ 6,660 ಹೊಸ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 63,380 ಕ್ಕೆ ಇಳಿದಿದೆ. ಕೋವಿಡ್ ಸಾಂಕ್ರಾಮಿಕದ ಕೊನೆಯ 24 ಗಂಟೆಗಳಲ್ಲಿ ಒಟ್ಟು 24 ಸಾವುಗಳು ವರದಿಯಾಗಿವೆ. ಪಂಜಾಬ್‌ನಲ್ಲಿ ನಾಲ್ವರು, ದೆಹಲಿಯಲ್ಲಿ ಮೂವರು, ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿ ಇಬ್ಬರು, ಬಿಹಾರ, ಹರಿಯಾಣ, ರಾಜಸ್ಥಾನ ಮತ್ತು ತಮಿಳುನಾಡಿನಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಕೇರಳದಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ ಸಾವಿನ ಸಂಖ್ಯೆ 5,31,369 ಕ್ಕೆ ಏರಿದೆ.
ದೈನಂದಿನ ಧನಾತ್ಮಕತೆಯ ದರ ಶೇಕಡಾ 3.52ರಷ್ಟಿದೆ. ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 4.49 ಕೋಟಿ. ರಾಷ್ಟ್ರೀಯ ಕೋವಿಡ್-19 ಚೇತರಿಕೆಯ ಪ್ರಮಾಣವು ಶೇಕಡಾ 98.67 ರಷ್ಟಿದ್ದರೆ, ಸಕ್ರಿಯ ಪ್ರಕರಣಗಳು ಶೇಕಡಾ 0.14 ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ. ಕೊರೊನಾದಿಂದ ಚೇತರಿಸಿಕೊಂಡವರ ಸಂಖ್ಯೆ 4,43 ರಿಂದ 11,078 ಕ್ಕೆ ಏರಿದೆ. ಮರಣ ಪ್ರಮಾಣವು 1.18 ರಷ್ಟು ದಾಖಲಾಗಿದೆ. ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದಡಿಯಲ್ಲಿ ಇದುವರೆಗೆ 220.66 ಕೋಟಿ ಕೋವಿಡ್ ಲಸಿಕೆಗಳನ್ನು ದೇಶದಲ್ಲಿ ನೀಡಲಾಗಿದೆ.
ಏತನ್ಮಧ್ಯೆ ಏಪ್ರಿಲ್ 24 ರಂದು, ಭಾರತವು 7,178 ಹೊಸ ಕೋವಿಡ್ -19 ಪ್ರಕರಣಗಳನ್ನು ವರದಿಯಾಗಿವೆ.