ಪಾಕ್ ವಾಯು ಪ್ರದೇಶ ಪ್ರವೇಶಿಸಿದ ಇಂಡಿಗೋ ವಿಮಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರೀನಗರ-ಜಮ್ಮು ಇಂಡಿಗೋ ವಿಮಾನ ಪಾಕಿಸ್ತಾನದ ವಾಯು ಪ್ರದೇಶವನ್ನು ಪ್ರವೇಶಿಸಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ಪ್ರತಿಕೂಲ ಹವಾಮಾನದಿಂದಾಗಿ ಸ್ವಲ್ಪ ಸಮಯದವರೆಗೆ ಪಾಕ್ ವಾಯು ಪ್ರದೇಶವನ್ನು ಪ್ರವೇಶಿಸಿತ್ತು. ನಂತರ ವಿಮಾನವನ್ನು ಮತ್ತೆ ಅಮೃತ್‌ಸರ್ ಕಡೆಗೆ ತಿರುಗಿಸಲಾಗಿದೆ.

ಇಂಡಿಗೋ 6ಇ-2124 ವಿಮಾನ ಪ್ರತಿಕೂಲ ಹವಾಮಾನದಿಂದ ಕೆಲ ಸಮಯ ಪಾಕ್ ವಾಯು ಪ್ರದೇಶ ಪ್ರವೇಶಿಲಿದೆ ಎನ್ನುವ ಮಾಹಿತಿಯನ್ನು ಮೊದಲಿಗೆ ಎರಡೂ ದೇಶಗಳ ಅಧಿಕಾರಿಗಳಿಗೆ ತಿಳಿಸಲಾಗಿತ್ತು. ವಿಮಾನವು ಜಮ್ಮಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಪ್ರತಿಕೂಲ ಹವಾಮಾನದಿಂದ ವಿಮಾನವನ್ನು ಅಮೃತ್‌ಸರ್‌ಗೆ ಡೈವರ್ಟ್ ಮಾಡಲಾಗಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!