ಹೊಸ ದಿಗಂತ ವರದಿ, ಮುಂಡಗೋಡ:
ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಹೊಂದಿರುವ ಇಂದೂರು ಹೊಯ್ಸಳ 146 ಎಂದು ಖ್ಯಾತಿ ಪಡೆದಿರುವ ಹೋರಿ ಹಬ್ಬದ ಎತ್ತು ಅನಾರೊಗ್ಯದಿಂದ ಬಾರದ ಲೋಕಕ್ಕೆ ತೆರಳಿದೆ.
ತಾಲುಕನ್ನು ಹೊರತು ಪಡಿಸಿ ಉತ್ತರ ಕನ್ನಡ, ಶಿವಮೊಗ್ಗ,ದಾರವಾಡ ಜಿಲ್ಲೆ, ಹಾವೇರಿ ಜಿಲ್ಲೆಗಳಲ್ಲಿ ಅಪಾರ ಅಭಿಮಾನಿ ಬಳಗದ ಬಳಗವನ್ನು ಹೊಂದಿತ್ತು.
ಹೋರಿ ಹಬ್ಬ ಬಂತೆಂದರೆ ಸಾಕು ಕೊಂಬ್ಬಿಗೆ ಬಲೂನಿನಿಂದ ಸಿಂಗರಿಸಿ ಹಬ್ಬದಲ್ಲಿ ಬಣ್ಣ ಹಚ್ಚಿಕೊಂಡು ನಿಂತರೆ ಸಾಕು ಮಹಾರುದ್ರನಂತೆ ಭಯಂಕರವಾಗಿ ತನ್ನ ಕಣ್ಣೆನಲ್ಲಿ ಸಾರ್ವಜನಿಕರನ್ನು ಹೆದರಿಸುವ ಸಾಮರ್ಥ್ಯವನ್ನು ಹೊಂದಿತ್ತು. ಕಾಲುಕೆದರಿ ನಿಂತರೆ ಸಾಕು ಹಬ್ಬದಲ್ಲಿ ಭಾಗವಹಿಸಿ ಹಿಡಿಯಬೇಕು ಎಂದು ಬಂದವರ ಎದೆಯ ಬಡಿತ ಒಂದು ಕ್ಷಣ ನಿಂತು ಹೋಗುತ್ತಿತ್ತು. ಆದರೆ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಮಾತ್ರ ಬಹುದೊಡ್ಡ ಸ್ಥಾನ ಪಡದಿತ್ತು.
ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ಹುಟ್ಟಿ, ರಾಜ್ಯದ ನಾನಾ ಕಡೆ ಸ್ಪರ್ಧಾ ಕಣದಲ್ಲಿ ಧೂಳೆಬ್ಬಿಸಿ, ಸಹಸ್ರಾರು ಅಭಿಮಾನಿಗಳ ಪಾಲಿನ ದೇವರಾದ ‘ಇಂದೂರಿನ ಹೊಯ್ಸಳ’ ಸ್ಪರ್ಧಾ ಹೋರಿಯು ಇದಾಗಿತ್ತು.
ಇಂದೂರಿನ ಹೊಯ್ಸಳ ಸ್ಪರ್ಧಾ ಹೋರಿ ಎಂದು ಖ್ಯಾತಿ ಪಡೆದಿರುವ ಹೋರಿ ತೀವ್ರ ಅನಾರೋಗ್ಯದಿಂದ ಬಳಲಿ ಮೃತಪಟ್ಟಿದೆ.
ರಾಜ್ಯದ ವಿವಿಧ ಭಾಗಗಳಲ್ಲಿ ಹೊರಿ ಬೆದರಿಸುವ ಸ್ಪರ್ಧೆಗಳಲ್ಲಿ ಪಾಲ್ಗೊಂಡು, ನೂರಾರು ಬಹುಮಾನಗಳನ್ನು ಬಾಚಿ ಕೊಂಡು ಅನೇಕ ಜನರ ಮನಸ್ಸನ್ನು ಗೆದ್ದು ತನ್ನದೇ ಆದ ಅಭಿಮಾನಿ ಬಳಗ ಹೊಂದಿದ್ದ ಹೋರಿ ಪ್ರಖ್ಯಾತಿ ಪಡೆದಿತ್ತು.
ಸೋಮವಾರ ಇಂದೂರಿನಲ್ಲಿ “ಇಂದೂರು ಹೊಯ್ಸಳ” ಹೋರಿಯ ಪಾರ್ಥೀವ ಶರೀರದ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು.
ಮೃತಪಟ್ಟ ಹೊರಿಯನ್ನು ನೋಡಲು ಸಾವಿರಾರು ಅಭಿಮಾನಿಗಳಲ್ಲಿ ದಂಡೇ ಅಂತಿಮ ದರ್ಶನಕ್ಕಾಗಿ ಹರಿದು ಬಂದಿದ್ದು ಕೆಲವು ಅಭಿಮಾನಿಗಳು ಬಿಕ್ಕಿ ಬಿಕ್ಕಿ ಅಳುತ್ತಿರುವುದು ಕಂಡು ಬಂದಿತು.
ನಂತರ ಮೆರವಣಿಗೆ ನಡೆಸಿ ಅಭಿಮಾನಿಗಳ ಸಮ್ಮುಖದಲ್ಲಿ ಅಂತಿಮ ಸಂಸ್ಕಾರ ನಡೆಸಲಾಯಿತು. ಅಭಿಮಾನಿಗಳಾದ ಉಮೇಶ ನಡಗೇರ, ನಾಗರಾಜ ರಜಪೂತ, ಮುತ್ತು ತಡಸದ, ಶರಣು ಆರಭಟ್ಟನವರ, ನವೀನ್ ನಡಗೇರ, ಸದಾನಂದ ಕೇರಾಳ ಹೇಳಿದರು.