ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಇತ್ತೀಚಿನ ರೈಲ್ವೆ ಬಜೆಟ್‌ನಲ್ಲಿ ಭಾರತೀಯ ರೈಲ್ವೆಗೆ ಹಲವಾರು ಪ್ರಮುಖ ಬೆಳವಣಿಗೆಗಳನ್ನು ಘೋಷಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದ ಎಲ್ಲಾ ಭಾಗಕ್ಕೆ ಅತೀ ವೇಗದ ರೈಲು ಸೇವೆಗೆ ದೇಶಾದ್ಯಂತ 50 ನಮೋ ಭಾರತ್ ರೈಲುಗಳು ಮತ್ತು 200 ವಂದೇ ಭಾರತ್ ರೈಲುಗಳನ್ನು ಪರಿಚಯಿಸುವುದು ಸೇರಿದಂತೆ ಸೇವೆಗಳನ್ನು ವಿಸ್ತರಿಸಲು ಮತ್ತು ಆಧುನೀಕರಿಸಲು ಯೋಜನೆ ಘೋಷಿಸಿದ್ದಾರೆ. ಮುಂದಿನ 2 ರಿಂದ 3 ವರ್ಷಗಳಲ್ಲಿ ಈ ರೈಲು ಸೇವೆಗಳು ಹಂತ ಹಂತವಾಗಿ ಜಾರಿಯಾಗಲಿದೆ.
00 ಕಿಲೋಮೀಟರ್‌ಗಳವರೆಗಿನ ದೂರದಲ್ಲಿ ಸಂಚರಿಸುವ 50 ನಮೋ ಭಾರತ್ ಶಟಲ್ ರೈಲುಗಳನ್ನು ಪರಿಚಯಿಸುವುದು. ಹೆಚ್ಚುವರಿಯಾಗಿ, 200 ಹೊಸ ವಂದೇ ಭಾರತ್ ರೈಲುಗಳನ್ನು ಮತ್ತು ರೈಲು ಜಾಲವನ್ನು ಹೆಚ್ಚಿಸುವ ಗುರಿಯನ್ನು ಘೋಷಿಸಿದ್ದಾರೆ. 100 ಅಮೃತ್ ಭಾರತ್ ರೈಲುಗಳನ್ನು ಪರಿಚಯಿಸುವ ಬಗ್ಗೆ ಹೇಳಿದ್ದಾರೆ.
ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮ್ 2,52,000 ಕೋಟಿ ರೂಪಾಯಿ ಹಣವನ್ನು ರೈಲ್ವೇ ಸಚಿವಾಲಯಕ್ಕೆ ಮೀಸಲಿಡಲಾಗಿದೆ. ಈ ಕುರಿತು ಹರ್ಷ ವ್ಯಕ್ತಪಡಿಸಿದ ಅಶ್ವಿನಿ ವೈಷ್ಣವ್, ಕೇಂದ್ರ ಸರ್ಕಾರ ಭಾರತೀಯ ರೈಲ್ವೇ ಆಧುನೀಕರಣ ಹಾಗೂ ಹೆಚ್ಚುವರಿ ಸೇವೆಗೆ ಪ್ರಮುಖ ಆದ್ಯತೆ ನೀಡಿದೆ ಎಂದಿದ್ದಾರೆ.
ಹೊಸ ರೈಲುಗಳು ಮಧ್ಯಮ ಹಾಗೂ ಬಡ ಕುಟುಂಬಗಳ ಪ್ರಯಾಣಕ್ಕೆ ಅನುವು ಮಾಡಿಕೊಡಲಿದೆ. ಕೈಗೆಟುಕುವ ದರದಲ್ಲಿ ಹಾಗೂ ಪ್ರತಿಯೊಬ್ಬ ಪ್ರಯಾಣಿಕ ಆರಾಮವಾಗಿ ಪ್ರಯಾಣಿಸುವಂತೆ ಮಾಡುವುದು ಗುರಿಯಾಗಿದೆ. ಹೀಗಾಗಿ ಸುರಕ್ಷತೆ ಹಾಗೂ ಹೆಚ್ಚುವರಿ ರೈಲು ಸೇವೆಗಳ ಕುರಿತು ಯೋಜನೆಗಳು ಜಾರಿಯಲ್ಲಿದೆ ಎಂದಿದ್ದಾರೆ.
ಕೇರಳದಲ್ಲಿ ರೈಲ್ವೆ ಅಭಿವೃದ್ಧಿಗಾಗಿ ₹ 3042 ಕೋಟಿ ಹಂಚಿಕೆ ಮಾಡುವುದಾಗಿ ಸಚಿವರು ವಿವರಿಸಿದರು. ಈ ಉಪಕ್ರಮದ ಭಾಗವಾಗಿ, 25 ರೈಲು ನಿಲ್ದಾಣಗಳನ್ನು ನವೀಕರಿಸಲಾಗಿದೆ ಮತ್ತು 14,000 ಹೊಸ ಬೋಗಿಗಳನ್ನು ತಯಾರಿಸಲಾಗಿದೆ. ನೀಲಾಂಬೂರ್-ನಂಜನಗೂಡು ಯೋಜನೆ ಪ್ರಗತಿಯಲ್ಲಿದೆ ಮತ್ತು ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಶೀಘ್ರದಲ್ಲೇ ಪರಿಚಯಿಸಲಾಗುವುದು ಎಂದು ತಿಳಿಸಿದರು.