October 10, 2026
Saturday, October 10, 2026
spot_img

SHOCKING | ಮಾಗಡಿ ಕೆರೆಯಲ್ಲಿ ತೇಲುತ್ತಿತ್ತು ಕಂದಮ್ಮನ ಮೃತದೇಹ, ಬೆಚ್ಚಿಬಿದ್ದ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ಬನವಾಡಿ ಕೆರೆಯಲ್ಲಿ ಮೂರು ವರ್ಷದ ಮಗುವಿನ ಮೃತದೇಹವೊಂದು ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕುದೂರು ಪೊಲೀಸ್‌ ವ್ಯಾಪ್ತಿಯ ಬಸವಣ್ಣ ದೇಗುಲದ ಬಳಿಯ ಕೆರೆಯಲ್ಲಿ ಮಗುವಿನ ಮೃತದೇಹ ಕಾಣಿಸಿದ್ದು, ಜನ ಬೆಚ್ಚಿಬಿದ್ದಿದ್ದಾರೆ. ಸುಮಾರು ಮೂರು ತಿಂಗಳ ಮಗು ಇದಾಗಿದೆ.

ಗ್ರಾಮ ಪಂಚಾಯತಿ ಸದಸ್ಯರೊಬ್ಬರು ಮೃತದೇಹ ತೇಲುತ್ತಿರುವುದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ಮಾಹಿತಿ ಅನ್ವಯ ಮಗು ಸತ್ತು ಎರಡು ತಿಂಗಳಾಗಿದೆ. ಸದ್ಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ನಿಖರ ಕಾರಣ ತಿಳಿಯಲಿದೆ.

ಮಗುವಿನ ಜೊತೆ ತಾಯಿ ಹಾರಿ ಆತ್ಮಹತ್ಯೆಗೆ ಶರಣಾಗಿರಬಹುದಾ ಅಥವಾ ಯಾರಾದ್ರೂ ಮಗುವನ್ನು ಎಸೆದು ಹೋಗಿರಬಹುದಾ?ಕೊಲೆ ಮಾಡಿ ನದಿಗೆ ಎಸೆದಿರಬಹುದಾ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Must Read