February 17, 2026
Tuesday, February 17, 2026
spot_img

ಕಬ್ಬನ್‌ಪಾರ್ಕ್‌ನ No kissing ಬೋರ್ಡ್‌ ಮುಂದೆಯೇ ನಿಂತು ಕಿಸ್‌ ಮಾಡಿದ ಇನ್ಫ್ಲುಯೆನ್ಸರ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಾರ್ವಜನಿಕ ಸ್ಥಳಗಳಲ್ಲಿ ಹೇಗಿರಬೇಕೋ ಹಾಗಿದ್ದರೆ ಚಂದ. ಯಾವ ಸ್ಥಳದಲ್ಲಿ ಯಾವ ರೀತಿ ಇರಬೇಕು ಅನ್ನೋದು ಎಲ್ಲರಿಗೂ ಇರಬೇಕಾದ ಕಾಮನ್‌ ಸೆನ್ಸ್‌. ಆದರೆ ಕಬ್ಬನ್‌ ಪಾರ್ಕ್‌ನಲ್ಲಿ ಇದೇ ವಿಷಯ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಕಬ್ಬನ್‌ ಪಾರ್ಕ್‌ನಲ್ಲಿ ಈ ಹಿಂದೆ ಸಾಕಷ್ಟು ಅಸಭ್ಯ ಕೆಲಸಗಳು ನಡೆದಿವೆ. ಜನರಿಗೆ ಮುಜುಗರ ಆಗುವಂಥ ಘಟನೆಗಳು ಆಗಿವೆ. ಹೀಗಾಗಿ ಇಲ್ಲಿ ಅಸಭ್ಯ ವರ್ತನೆ ನಿಷಿದ್ಧ ಎನ್ನುವ ಬೋರ್ಡ್‌ ಹಾಕಲಾಗಿದೆ. ಈ ರೀತಿ ಕೆಟ್ಟದಾಗಿ ವರ್ತಿಸಿದರೆ ದಂಡ ಹಾಕಲಾಗುತ್ತದೆ ಎಂದು ಹೇಳಿದೆ. ಬೋರ್ಡ್‌ನಲ್ಲಿ ಹುಡುಗ-ಹುಡುಗಿ ಮುತ್ತಿಡುತ್ತಿರುವ ದೃಶ್ಯ ಇದೆ.

ಆದರೆ ಇದಕ್ಕೆ ಇನ್‌ಫ್ಲುಯೆನ್ಸರ್ ಒಬ್ಬರು ವಿರೋಧ ವ್ಯಕ್ತಪಡಿಸಿದ್ದು, ಫಲಕದ ಮುಂದೆಯೇ ಕಿಸ್‌ ಮಾಡಿದ್ದಾರೆ.ನಾನು ನಿಮಗೆ ಕಬ್ಬನ್ ಪಾರ್ಕ್‌ನಲ್ಲಿರುವ ಒಂದು ಬೋರ್ಡ್ ತೋರಿಸುತ್ತೇನೆ. ಇಲ್ಲಿ ಅಸಭ್ಯ ವರ್ತನೆಗೆ ದಂಡ ವಿಧಿಸಲಾಗುವುದು ಎಂದು ಬರೆಯಲಾಗಿದೆ. ಇಲ್ಲಿ ತೋರಿಸಲಾಗಿರುವ ಚಿತ್ರವೇ ತಪ್ಪು. ಒಬ್ಬ ವ್ಯಕ್ತಿ ತನ್ನ ಪತ್ನಿ ಅಥವಾ ಪ್ರೇಯಸಿಯನ್ನು ಪ್ರೀತಿಸುವುದು ಅಥವಾ ಮುತ್ತಿಡುವುದು ಅಸಭ್ಯ ವರ್ತನೆಯಲ್ಲ. ಬದಲಿಗೆ ಬೇರೆಯವರನ್ನು ಚುಡಾಯಿಸುವುದು, ಗಲಾಟೆ ಮಾಡುವುದು ಅಥವಾ ರೇಗಿಸುವುದು ನಿಜವಾದ ಅಸಭ್ಯ ವರ್ತನೆ. ಇದನ್ನು ನಾವು ಪ್ರಶ್ನಿಸಬೇಕು ಎಂದಿದ್ದಾರೆ.

ದಂಡ ಎಂದಮೇಲೆ ದಂಡ ಅಷ್ಟೆ ಈ ವ್ಯಕ್ತಿಗೂ ದಂಡ ಹಾಕಿ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !