July 20, 2026
Monday, July 20, 2026
spot_img

ಡಿಜಿಟಲ್‌ ಅರೆಸ್ಟ್‌ನಿಂದ ಬಚಾವ್‌: 8ನೇ ಕ್ಲಾಸ್‌ ಬಾಲಕನ ಚಾಣಾಕ್ಷತನದಿಂದ ಉಳಿಯಿತು ಲಕ್ಷ ಲಕ್ಷ ಹಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಎಂಟನೇ ಕ್ಲಾಸ್‌ನ ಬಾಲಕನ ಚಾಣಾಕ್ಷತದಿಂದ ಪೋಷಕರು ಡಿಜಿಟಲ್‌ ಅರೆಸ್ಟ್‌ನಿಂದ ಬಚಾವ್‌ ಆದ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ.

ಸುಮಾರು ಹತ್ತು ಗಂಟೆಗಳ ಕಾಲ ಒತ್ತೆಯಾಳಾಗಿದ್ದ ಪೋಷಕರನ್ನು ಮಗ ರಕ್ಷಿಸಿದ್ದಾನೆ.

ಏನಾಯ್ತು?
ಬರೇಲಿಯ ಪ್ರೇಮ್‌ ನಗರದ ನಿವಾಸಿ, ವ್ಯಾಪಾರಿಯಾದ ಸಂಜಯ್‌ ಸಕ್ಸೇನಾಗೆ ಸೈಬರ್‌ ವಂಚಕರಿಂದ ಕರೆ ಬಂದಿದೆ. ನಾವು ತನಿಖಾ ಸಂಸ್ಥೆಯ ಅಧಿಕಾರಿಗಳು, ನಿಮಗೆ ಭಯೋತ್ಪಾದಕರ ಜತೆ ಸಂಪರ್ಕ ಇದೆ. ಬಹುಕೋಟಿ ಹಗರಣದಲ್ಲಿ ಭಾಗಿಯಾಗಿದ್ದೀರಿ ಎಂದು ಹೇಳಿದ್ದಾರೆ. ಅರೆಸ್ಟ್‌ ವಾರೆಂಟ್‌ ತೋರಿಸಿ ಸ್ಕ್ರೀನ್‌ ಮುಂದೆಯೇ 10 ಗಂಟೆಗಳ ಕಾಲ ಇಟ್ಟುಕೊಂಡಿದ್ದಾರೆ.

ಕಾಲ್‌ ಕಟ್‌ ಮಾಡುವಂತಿಲ್ಲ. ನಿದ್ದೆ ಬಂದರೂ ಕ್ಯಾಮರಾ ಮುಂದೆ, ಊಟ ಮಾಡುವುದೂ ಕ್ಯಾಮರಾ ಮುಂದೆ ಎಂದು ಧಮ್ಕಿ ಹಾಕಿದ್ದಾರೆ. ಬ್ಯಾಂಕ್‌ ಡೀಟೇಲ್ಸ್‌ ಪಡೆದುಕೊಂಡಿದ್ದರು. ಪೋಷಕರ ವರ್ತನೆ ಯಾಕೋ ಮಾಮೂಲಾಗಿಲ್ಲ ಎಂದು ಗಮನಿಸಿದ ಬಾಲಕ ತಕ್ಷಣವೇ ರೂಮಿನೊಳಗೆ ಹೋಗಿ ಪೋಷಕರು ಬೇಡ ಎಂದು ಹೇಳಿದರೂ ಫೋನ್‌ ಕಿತ್ತುಕೊಂಡು ಫ್ಲೈಟ್‌ ಮೋಡ್‌ಗೆ ಹಾಕಿದ್ದಾನೆ. ಇದರಿಂದ ಕಾಲ್‌ ಕಟ್‌ ಆಗಿದೆ.

ಮರುದಿನ ಪೊಲೀಸರ ಬಳಿಗೆ ಹೋಗಿ ಫೋನ್‌ ಆನ್‌ ಮಾಡಿದ್ದಾರೆ. ತಕ್ಷಣವೇ ಕರೆ ಬಂದಿದೆ. ಪೊಲೀಸರೇ ಕರೆ ಸ್ವೀಕರಿಸಿ ಸೈಬರ್‌ ವಂಚಕರಿಗೆ ಎಚ್ಚರಿಕೆ ನೀಡಿದ್ದಾರೆ. ಡಿಜಿಟಲ್‌ ಅರೆಸ್ಟ್‌ ಅನ್ನೋದೆಲ್ಲ ಸುಳ್ಳು ಇಂಥ ಕರೆ ಬಂದರೆ ಸೀದ ಪೊಲೀಸರ ಬಳಿ ಬನ್ನಿ ಎಂದು ಪೊಲೀಸರು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !