ಶುಭ್​ಮನ್​ ಗಿಲ್​ಗೆ ಇಂಜುರಿ: ಮಧ್ಯದಲ್ಲೇ ಮೈದಾನ ತೊರೆದ ಬ್ಯಾಟರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನ್ಯೂಜಿಲೆಂಡ್ ವಿರುದ್ಧ ವಿಶ್ವಕಪ್ (World Cup 2023) ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾ (India Vs New Zealand) ರನ್ ಹೆಚ್ಚಿಸುತ್ತಿದ್ದು, ಆರಂಭಿಕ ರೋಹಿತ್ ಶರ್ಮಾ (Rohit Sharma) ಅವರ ಏಕೈಕ ವಿಕೆಟ್ ಕಳೆದುಕೊಂಡು ಉತಮ್ಮ ಬ್ಯಾಟಿಂಗ್ ನತ್ತ ಸಾಗುತ್ತಿದ್ದ ಟೀಮ್ ಗೆ ಗಿಲ್ ಶಾಕ್ ನೀಡಿದ್ದು, ರೋಹಿತ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ್ದ ಶುಭ್​ಮನ್ ಗಿಲ್ (Shubman Gill), ಸ್ನಾಯು ಸೆಳೆತದಿಂದಾಗಿ ಆಟದ ಮಧ್ಯದಲ್ಲೇ ಮೈದಾನವನ್ನು ತೊರೆದಿದ್ದಾರೆ.

ಹೀಗಾಗಿ ರಿಟೈರ್ಡ್​ ಹರ್ಟ್​ ಆಗಿರುವ ಗಿಲ್ ಬದಲಿಗೆ ಶ್ರೇಯಸ್ ಅಯ್ಯರ್, ವಿರಾಟ್ ಕೊಹ್ಲಿ (Virat Kohli) ಅವರೊಂದಿಗೆ ಕ್ರೀಸ್​ನಲ್ಲಿದ್ದಾರೆ.

ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಶುಭ್​ಮನ್​ ಗಿಲ್ ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್​ಗೆ ಮುಂದಾಗಿದ್ದರು. ಈ ಮೂಲಕ ಮೊದಲ ವಿಕೆಟ್​ಗೆ ರೋಹಿತ್ ಅವರೊಂದಿಗೆ ಅರ್ಧಶತಕದ ಜೊತೆಯಾಟವನ್ನು ಹಂಚಿಕೊಂಡರು.

ಬಳಿಕ ಕೊಹ್ಲಿ ಅವರೊಂದಿಗೆ ವಿಕೆಟ್ ಮಧ್ಯದಲ್ಲಿ ಓಡಲು ಕಷ್ಟ ಪಡುತ್ತಿದ್ದ ಗಿಲ್ ಅವರನ್ನು ಮೈದಾನದಿಂದ ಹೊರಬರುವಂತೆ ನಾಯಕ ರೋಹಿತ್ ಶರ್ಮಾ ಸೂಚನೆ ನೀಡಿದರು. ಆ ಬಳಿಕ ನಾಯಕನ ಸಲಹೆ ಮೇರೆಗೆ ಗಿಲ್, 65 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 79 ರನ್ ಸಿಡಿಸಿ, ಪೆವಿಲಿಯನ್ ಸೇರಿಕೊಂಡಿದ್ದಾರೆ. ಇದೀಗ ಇಂಜುರಿಯಿಂದ ಪೆವಿಲಿಯನ್ ಸೇರಿಕೊಂಡಿರುವ ಗಿಲ್, ಮತ್ತೊಂದು ವಿಕೆಟ್ ಬಿದ್ದ ಬಳಿಕವೂ ಬ್ಯಾಟಿಂಗ್​ಗೆ ಬರಬಹುದಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!