ಇನ್ಮುಂದೆ ಪುಟಾಣಿಗಳಿಗೆ ನೋ ಹೋಮ್ ವರ್ಕ್: ಶೈಕ್ಷಣಿಕ ವರ್ಷದಿಂದಲೇ ಹೊಸ ರೂಲ್ಸ್ ಜಾರಿ?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯಾದ್ಯಂತ 2022-23ನೇ ಸಾಲಿನ ಶೈಕ್ಷಣಿಕ ವರ್ಷ ಮೇ 16 ರಿಂದ ಫ್ರಾರಂಭವಾಗಿದೆ. ನಡುವೆ ಸದ್ಯದಲ್ಲಿಯೇ ಮಕ್ಕಳಿಗೆ ನೀಡುವ ಹೋಮ್ ವರ್ಕ್​​ಗೆ ಬ್ರೇಕ್ ಬೀಳುವ ನಿರೀಕ್ಷೆ ಇದ್ದು, ಇನ್ಮುಂದೆ ಶಿಕ್ಷಕರು ಎರಡನೇ ತರಗತಿವರೆಗೆ ಮಕ್ಕಳಿಗೆ ಹೋಮ್ ವರ್ಕ್ ಕೊಡುವಂತಿಲ್ಲ.
ಸರ್ಕಾರಿ ಶಾಲೆಗಳಿಗೆ ಈ ವರ್ಷದಿಂದಲೇ ನಲಿ – ಕಲಿ ರೀತಿ ಮಾತ್ರ ಪುಟ್ಟ ಮಕ್ಕಳಿಗೆ ಶಿಕ್ಷಣ ಇರಲಿದೆ.
ಸರ್ಕಾರಿ ಶಾಲೆ ರೀತಿಯಲ್ಲಿ ಖಾಸಗಿ ಶಾಲೆಗೂ ಈ ಆದೇಶ ಹೊರಡಿಸಲು ಶಿಕ್ಷಣ ಇಲಾಖೆ ತಯಾರಿ ನಡೆಸಿದೆ.‌ ಹೋಮ್ ವರ್ಕ್​ ವಿಚಾರವಾಗಿ ಮದ್ರಾಸ್ ಹೈಕೋರ್ಟ್ ಹಾಗೂ ಕೇಂದ್ರ ಶಿಕ್ಷಣ ಸಚಿವರ ಹೇಳಿಕೆ ಹಿನ್ನೆಲೆ ರಾಜ್ಯದಲ್ಲಿ ಮಕ್ಕಳಿಗೆ ಹೋಮ್ ವರ್ಕ್ ಬ್ರೇಕ್ ಹಾಕಲು ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ.
ಹೀಗಾಗಿ ಖಾಸಗಿ ಶಾಲೆಗಳಲ್ಲಿ ಕನಿಷ್ಠ 2ನೇ ತರಗತಿವರೆಗೆ ಹೋಂ ವರ್ಕ್ ಬ್ರೇಕ್ ಹಾಕಲು ಶಿಕ್ಷಣ ಇಲಾಖೆ ಒಲವು ತೋರಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, 2ನೇ ತರಗತಿವರೆಗೆ ಮಕ್ಕಳಿಗೆ ಹೋಂ ವರ್ಕ್ ನೀಡುವಂತಿಲ್ಲ ಎಂದು ಎನ್ಇಪಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. 1-2ನೇ ತರಗತಿ ಮಕ್ಕಳಿಗೆ ಆಟ, ಡ್ರಾಮಾ, ಪದ್ಯ ಹೇಳಿಸುತ್ತಾ ಹೀಗೆ ಚಟುವಟಿಕೆ ಮೂಲಕ ಪಾಠ ಮಾಡುವುದು. ಅಕ್ಷರ ಜ್ಞಾನ ಹಾಗೂ ಸಂಖ್ಯಾ ಜ್ಞಾನಕ್ಕೆ ಹೆಚ್ಚು ಒತ್ತು ನೀಡಲಾಗುತ್ತೆ ಎಂದಿದ್ದಾರೆ.
ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ನಲಿ-ಕಲಿ ಪದ್ಧತಿ ಜಾರಿಯಲ್ಲಿದೆ. ಇನ್​ಇಪಿ ಜಾರಿ ಮುನ್ನವೇ ಖಾಸಗಿ ಶಾಲೆಯಲ್ಲೂ ಹೋಂ ವರ್ಕ್ ಸ್ಥಗಿತಗೊಳಿಸುವ ಕುರಿತು ಚಿಂತನೆ ನಡೆದಿದೆ ಎಂದು ಸಚಿವರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!