ಹೊಸದಿಗಂತ ವರದಿ, ಮಂಡ್ಯ :
ಕಾವೇರಿ ನದಿ ನೀರು ಪ್ರಾಧಿಕಾರ, ಸಮಿತಿ ಆದೇಶ ಹಾಗೂ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿರುವ ಕ್ರಮವನ್ನು ಖಂಡಿಸಿ ಇಂದು ರೈತರು ಮತ್ತು ನೇಗಿಲಯೋಗಿ ಸಮಾಜ ಸೇವಾ ಸಂಸ್ಥೆ ಪದಾಧಿಕಾರಿಗಳು ಹುರುಳಿ ಉರಿದು ವಿನೂತನ ಪ್ರತಿಭಟನೆ ನಡೆಸಿದರು.
ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ನಡೆಸುತ್ತಿರುವ 61ನೇ ದಿನ ಕಾವೇರಿ ಚಳವಳಿ ಧರಣಿಗೆ ನೇಗಿಲಯೋಗಿ ಸಮಾಜಸೇವಾ ಸಂಸ್ಥೆಯ ಪದಾಧಿಕಾರಿಗಳು ಮತ್ತು ರೈತಪರ ಹೋರಾಟಗಾರರು ಬೆಂಬಲ ನೀಡಿ, ಹುರುಳಿಕಾಳು ಹುರಿದು ತಿಂದು ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು
.
ಕಾವೇರಿ ನದಿ ಪಾತ್ರದ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ವಿಫಲವಾಗಿರುವುದರಿಂದಲೇ ನೂರಾರು ವರ್ಷಗಳಿಂದ ಸಮಸ್ಯೆ ಮುಂದುವರಿಯುತ್ತಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.
ಸ್ಥಳೀಯ ರೈತರ ಅನುಕೂಲಕ್ಕಿಲ್ಲದಿದ್ದರೂ ತಮಿಳುನಾಡಿಗೆ ಕಾವೇರಿ ನದಿ ನೀರನ್ನು ನಿರಂತರವಾಗಿ ಬಡುತ್ತಿರುವುದು ಖಂಡನೀಯ, 1991ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್.ಬಂಗಾರಪ್ಪ ಅವರ ಸರ್ಕಾರವು ಸುಪ್ರೀಂ ಕೋರ್ಟ್ ಆದೇಶವನ್ನು ದಿಕ್ಕರಿಸಿ, ಸುಗ್ರಿವಾಜ್ಞೆಯನ್ನು ತಂದು ಕಾವೇರಿ ನೀರನ್ನು ಬಿಡಲ್ಲ ಎಂದಿರುವುದುನ್ನು ಸ್ಮರಿಸಿದರು.
ಕೇಂದ್ರ ಸರ್ಕಾರ ಗೆಜಟ್‌ನೋಟಿಫಿಕೇಷನ್ ತಂದು ಕಾವೇರಿ ನದಿ ನೀರನ್ನು ಬಿಡಿಸಿತ್ತು, ಆ ಹತ್ತು ವರ್ಷಗಳ ನಂತರ 2002ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರ ಸರ್ಕಾರವು ನೀಡು ಬಿಟ್ಟಿರಲಲ್ಲ, ನ್ಯಾಯಾಂಗ ನಿಂಧನೆ ಕೇಸು ಹಾಕುವುದಾಗಿ ಹೇಳಿ ಮತ್ತೆ ನೀರನ್ನು ತಮಿಳುನಾಡು ಪಡೆಯಿತು ಎಂದು ಹೇಳಿದರು.