ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ನೌಕಾ ದಳದ ಕಡಲಾಚೆಯ ಗಸ್ತು ನೌಕೆ ಐಎನ್ ಎಸ್ ಸುಮೇದಾ ವಿಶಾಖಪಟ್ಟಣಕ್ಕೆ ಆಗಮಿಸಿದೆ.
ಬರೋಬ್ಬರಿ 22000 ನಾಟಿಕಲ್ ಮೈಲು ಜಂಟಿ ವ್ಯಾಯಾಮ ಕೈಗೊಂಡಿದ್ದ ಈ ಗಸ್ತು ನೌಕೆ ಆಫ್ರಿಕಾ ಸೇರಿದಂತೆ 12 ರಾಷ್ಟ್ರಗಳೊಂದಿಗೆ ಜಂಟಿ ನೌಕಾ ವ್ಯಾಯಾಮದಲ್ಲಿ ಪಾಲ್ಗೊಂಡಿತ್ತಲ್ಲದೆ, ಸಾಗರದಲ್ಲಿ ಕಡಲುಗಳ್ಳರ ವಿರೋಧಿ ಕಾರ್ಯಾಚರಣೆಗೂ ಸಾಥ್ ನೀಡಿತ್ತು.
ವಿಶಾಖ ಪಟ್ಟಣ್ಣಕ್ಕೆ ಮರಳಿದ ‘ಐಎನ್‌ಎಸ್ ಸುಮೇಧ’ಗೆ ನೌಕಾಪಡೆಯ ರಿಯರ್ ಅಡ್ಮಿರಲ್ ರಾಜೇಶ್ ಧಂಕರ್ ಸಹಿತ ಅಧಿಕಾರಿಗಳು, ನಾಗರಿಕರು ಸಂಭ್ರಮದಿಂದ ಸ್ವಾಗತ ನೀಡಿ ಬರಮಾಡಿಕೊಂಡರು.