ಹೊಸದಿಗಂತ ವರದಿ,ಅಂಕೋಲಾ:
ಅತಿಥಿ ಉಪನ್ಯಾಸಕರ ಪ್ರಮುಖ ಬೇಡಿಕೆಗಳನ್ನು ಸರ್ಕಾರ ಈಡೇರಿಸುವ ವರೆಗೆ ತರಗತಿಗಳನ್ನು ಬಹಿಷ್ಕರಿಸಿ ಮುಷ್ಕರ ಮುಂದುವರೆಸುವುದಾಗಿ ತಿಳಿಸಿರುವ ಅಂಕೋಲಾ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ತಹಶೀಲ್ಧಾರರ ಮೂಲಕ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು.
ಅಂಕೋಲಾ ಪ್ರಥಮ ದರ್ಜೆ ಕಾಲೇಜಿನಲ್ಲಿ 43 ಜನ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದು
ಸರ್ಕಾರ ನೀಡುತ್ತಿರುವ ಗೌರವ ಧನ ಅತ್ಯಂತ ಕಡಿಮೆ ಇದ್ದು ಗೌರವ ಧನ ಹೆಚ್ಚಿಸಬೇಕು,ಅತಿಥಿ ಉಪನ್ಯಾಸಕರ ಖಾಯಂ ನೇಮಕಾತಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಇನ್ನಿತರ ಬೇಡಿಕೆಗಳನ್ನು ಮುಂದಿಟ್ಟು ಕಳೆದ 38 ದಿನಗಳಿಂದ ತರಗತಿಗಳನ್ನು ಭಹಿಷ್ಕಾರಿಸಿ ಮುಷ್ಕರದಲ್ಲಿ ತೊಡಗಿ ಹಲವಾರು ಮನವಿಗಳನ್ನು ನೀಡಿದರೂ ಸರ್ಕಾರ ಯಾವುದೇ ಬೇಡಿಕೆಗಳನ್ನು ಈಡೇರಿಸದೇ ಇರುವುದರಿಂದ ಮುಷ್ಕರ ಮುಂದುವರೆಸುವುದು ಅನಿವಾರ್ಯವಾಗಿದೆ ಎಂದು ಅತಿಥಿ ಉಪನ್ಯಾಸಕರು ಮನವಿಯಲ್ಲಿ ತಿಳಿಸಿದ್ದಾರೆ.
ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಗೌರವ ಧನ ಹೆಚ್ಚಿಸಿರುವ ಕುರಿತು ಹೇಳಿಕೆಗಳನ್ನುನೀಡಲಾಯಿತಾದರೂ ಈಗ ಇದ್ದ ಕಾರ್ಯಭಾರವನ್ನು ಎರಡು ಪಟ್ಟು ಹೆಚ್ಚಿಸಲಾಗಿದೆ ಅದೇ ರೀತಿ ಯು.ಜಿ.ಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದ ಅತಿಥಿ ಉಪನ್ಯಾಸಕರು ವಿದ್ಯಾರ್ಹತೆ ಹೊಂದಲು 3 ವರ್ಷಗಳ ಕಾಲಾವಧಿ ನೀಡಿದ್ದು ಆ ಅವಧಿಯಲ್ಲಿ ನಿಗದಿತ ವಿದ್ಯಾರ್ಹತೆ ಹೊಂದಲು ಸಾಧ್ಯವಾಗದಿದ್ದರೆ ಅಂಥ ಉಪನ್ಯಾಸಕರ ನೇಮಕಾತಿ ನಿರ್ಬಂದಿಸುವುದಾಗಿ ಸೂಚಿಸಲಾಗಿದೆ ಆದರೆ ಕೆಲವು ಅತಿಥಿ ಉಪನ್ಯಾಸಕರು ಯುಜಿಸಿ ನಿಗದಿಪಡಿಸಿದ ವಯೋಮಾನವನ್ನು ದಾಟಿದ್ದಾರೆ ಸರ್ಕಾರದ ನಿಯಮಾವಳಿಗಳಿಂದ ಹಲವಾರು ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗಿ ಅವರ ಕುಟುಂಬ ಬೀದಿಗೆ ಬರಲಿದೆ ಆದ್ದರಿಂದ ಅತಿಥಿ ಉಪನ್ಯಾಸಕರ ಎಲ್ಲಾ ಬೇಡಿಕೆಗಳು ಈಡೇರಿಸುವ ವರೆಗೆ ತರಗತಿಗಳನ್ನು ಭಹಿಷ್ಕಾರಿಸಿ ಮುಷ್ಕರ ಮುಂದುವರಿಸಲಾಗುವುದು ಮನವಿಯಲ್ಲಿ ತಿಳಿಸಲಾಗಿದೆ.
ಅತಿಥಿ ಉಪನ್ಯಾಸಕ ವಿನೋದ ಶಾನಭಾಗ, ಕೃಷ್ಣಾ ಗೌಡ ಮೊದಲಾದವರು ಪಾಲ್ಗೊಂಡಿದ್ದರು.